ಮೂಡಿಗೆರೆ : ಬಾಳೂರು ಸುತ್ತಮುತ್ತ ಕಾಡಾನೆ ಹಾವಳಿ, ಕುಡಿಯುವ ನೀರಿನ ಪೈಪ್‍ಗೆ ಹಾನಿ…

226
firstsuddi

ಕೊಟ್ಟಿಗೆಹಾರ : ಬಾಳೂರು ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು ಬಾಳೂರಿನಲ್ಲಿ ಕುಡಿಯುವ ನೀರಿನ ಪೈಪ್‍ಗೆ ಹಾನಿಯಾಗಿದೆ.
ಬಾಳೂರು ತೋಟದಲ್ಲಿ ಕಳೆದ ಒಂದು ವಾರದಿಂದ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು ಮಲೆಮನೆ, ಮೇಗೂರು, ಬಾಳೂರು ಸುತ್ತಮುತ್ತ ಅಪಾರ ಪ್ರಮಾಣದ ಬೆಳೆಹಾನಿ ಮಾಡಿದೆ.
ಬಾಳೆ, ಅಡಿಕೆ, ಕಾಫಿ ಸೇರಿದಂತೆ ಬೆಳೆಗಳನ್ನು ತುಳಿದು ಹಾಕಿದ್ದು ಅಡಿಕೆ ಗಿಡಗಳನ್ನು ತುಳಿದು ಸಿಗಿದು ಹಾಕಿದೆ. ಬಾಳೂರಿನಲ್ಲಿ ಅರಣ್ಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುತ್ತಿದ್ದು ಮತ್ತೆ ತೋಟಗಳತ್ತ ಕಾಡಾನೆಗಳು ಮುಖ ಮಾಡುತ್ತಿವೆ.
ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಬಾಳೂರು ಹೋಬಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.