ಮೂಡಿಗೆರೆ : ಬಿಕ್ಕರಣೆ ಗ್ರಾಮದಲ್ಲಿ ಕಾಡಾನೆ ದಾಳಿ-ಅಪಾರ ಪ್ರಮಾಣದ ಬೆಳೆ ನಾಶ…

330
firstsuddi

ಕೊಟ್ಟಿಗೆಹಾರ : ಬಿಕ್ಕರಣೆ ಗ್ರಾಮದಲ್ಲಿ ಕೃಷಿ ಭೂಮಿಗೆ ಒಂಟಿ ಸಲಗವೊಂದು ಲಗ್ಗೆ ಇಟ್ಟಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.
ಬಿಕ್ಕರಣೆ ಗ್ರಾಮದ ಪ್ರಮೋದ್, ಚನ್ನಗಿರಿ ಅವರ ತೋಟಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಾಡಾನೆ ಕಾಫಿಗಿಡಗಳನ್ನು ತುಳಿದು ಹಾಕಿದ್ದು ತೆಂಗಿನ ಮರಗಳನ್ನು ನೆರಕುರಳಿಸಿ ತುಳಿದು ನಜ್ಜುಗುಜ್ಜಾಗಿಸಿದೆ. ಕೆಲವು ದಿನಗಳಿಂದ ಬಿಕ್ಕರಣೆ, ಸಾರಗೋಡು, ಕುಂದೂರು ಭಾಗದಲ್ಲಿ ಮೂರು ಆನೆಗಳು ಬೀಡು ಬಿಟ್ಟಿದ್ದು ರೈತರು ಬೆಳೆದ ಗದ್ದೆ, ಕಾಫಿತೋಟಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ಮಾಡುತ್ತಿದ್ ಕಾಡಾನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳೆಬೇಕು ಎಂದು ಈ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.