ಮೂಡಿಗೆರೆ : ಮನೆಯೊಳಗೆ ಅವಿತುಕೊಂಡ ಕಾಳಿಂಗ ಸರ್ಪ…!

1858
firstsuddi

ಮೂಡಿಗೆರೆ : ಊರುಬಗೆ ಸಮೀಪದ ಸತ್ತಿಗನಹಳ್ಳಿ ಮನೆಯೊಂದರಲ್ಲಿ ಕಾಳಿಂಗ ಸರ್ಪವೊಂದು ಅವಿತುಕೊಂಡಿದ್ದು, ಇಂದು ಮಧ್ಯಾಹ್ನ ಮನೆಯ ಬಾಗಿಲು ತೆಗೆದು ಒಳಗೆ ಪ್ರವೇಶಿಸಿದಾಗ ಕಾಳಿಂಗ ಸರ್ಪ ಪತ್ತೆಯಾಗಿದೆ. ಸತ್ತಿಗನಹಳ್ಳಿ ಲಕ್ಷ್ಮಣ ಗೌಡ ಎಂಬುವವರ ಮನೆಯಲ್ಲಿ ಹಾವು ಪತ್ತೆಯಾಗಿದ್ದು, ಮನೆಯವರೆಲ್ಲಾ ಪಟ್ಟಣಕ್ಕೆ ಹೋಗಿದ್ದು, ಮಧ್ಯಾಹ್ನ ವಾಪಸ್ಸಾಗಿ ಬಾಗಿಲು ತೆಗೆದಾಗ ಕಾಳಿಂಗ ಸರ್ಪವನ್ನು ಕಂಡು ಭಯಭೀತರಾದ ಇವರು ಊರುಬಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಂತೇಶ್ ಅವರಿಗೆ ವಿಷಯ ತಿಳಿಸಿದ್ದು, ಅವರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗತಜ್ಞರಾದ ಅಹಮ್ಮದ್ ಸಹಾಯದೊಂದಿಗೆ ಮೂಡಿಗೆರೆ ಉಪ ಅರಣ್ಯಾಧಿಕಾರಿಯಾದ ಚೇತನ್ ಹಾಗೂ ಸಿಬ್ಬಂಧಿ ಆನಂದ್ ಅವರು ಸುಮಾರು 10 ಅಡಿ ಉದ್ದದ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯದಲ್ಲಿ ಬಿಟ್ಟಿದ್ದಾರೆ.