ಮೂಡಿಗೆರೆ : ಮಾಳಿಂಗನಾಡು ನೆಲ್ಲಿಕಟ್ಟೆ ರಸ್ತೆ ಸಂಪೂರ್ಣ ಕೆಸರುಮಯ-ದುರಸ್ಥಿಗೆ ಗ್ರಾಮಸ್ಥರ ಆಗ್ರಹ…

181
firstsuddi

ಕೊಟ್ಟಿಗೆಹಾರ : ಮಾಳಿಂಗನಾಡು ಸಮೀಪದ ಮಾಳಿಂಗನಾಡು ನೆಲ್ಲಿಕಟ್ಟೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ದುರಸ್ಥಿ ಮಾಡುವಂತೆ ಮಾಳಿಂಗನಾಡು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥ ಸುದೀಪ್ ಮಾತನಾಡಿ ಈ ರಸ್ತೆಯೂ ಸಂಪೂರ್ಣ ಕೆಸರುಮಯವಾಗಿದ್ದು ಈ ರಸ್ತೆಯಲ್ಲಿ ವಾಹನಗಳು ಹರಸಾಹಸ ಪಟ್ಟು ಸಂಚರಿಸುವಂತಾಗಿದೆ. ಕೆಸರಿನಲ್ಲಿ ವಾಹನಗಳು ಸಿಲುಕಿ ತೊಂದರೆ ಪಡುವಂತಾಗಿದೆ. ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಕೆಸರುಮಯ ರಸ್ತೆಯಲ್ಲಿ ಸರ್ಕಸ್ ಮಾಡಿ ಕೊಂಡು ಸಂಚರಿಸುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.