ಮೂಡಿಗೆರೆ : ಲಾಕ್‍ಡೌನ್ ಉಲ್ಲಂಘನೆ-ಸಚಿವ ಸಿ.ಟಿ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬಣಕಲ್ ಠಾಣೆಗೆ ದೂರು…

255
firstsuddi

ಕೊಟ್ಟಿಗೆಹಾರ: ಜುಲೈ 5 ರ ಭಾನುವಾರ ಲಾಕ್‍ಡೌನ್ ನಡುವೆಯೂ ದೇವರಮನೆಗೆ ಬೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಣಕಲ್ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಟಿ.ಎಂ ಸುಬ್ರಮಣ್ಯ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 5 ರ ಭಾನುವಾರ ಲಾಕ್‍ಡೌನ್ ಇದ್ದರೂ ಸಹ ಅದನ್ನು ದಿಕ್ಕರಿಸಿ ತಮ್ಮ ಕಾರ್ಯಕರ್ತರು, ಹಾಲಿ ಶಾಸಕರು, ಬೆಂಬಲಿಗರೊಂದಿಗೆ ದೇವರಮನೆಗೆ ಆಗಮಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ತಮ್ಮ ಇಡಿ ಗುಂಪನ್ನು ಕಟ್ಟಿಕೊಂಡು ದೇವಸ್ಥಾನದ ಮುಂಭಾಗದಲ್ಲಿ ಮಾಸ್ಕ್‍ಗಳನ್ನು ಧರಿಸದೆ ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಲಾಕ್‍ಡೌನ್ ಉಲ್ಲಂಘನೆ ಮಾಡಿ ಸ್ಥಳೀಯರ ನೆಮ್ಮದಿ ಕೆಡಿಸಿದ್ದಾರೆ. ಸಿ.ಟಿ ರವಿ ಅವರಿಗೆ ಕರೊನಾ ಸೋಂಕು ದೃಡಪಟ್ಟಿರುವುದರಿಂದ ಸ್ಥಳೀಯರು ಹೋಂ ಕ್ವಾರಂಟೈನ್‍ನಲ್ಲಿರಬೇಕಾಗಿದ್ದು ಇದರಿಂದ ಕೃಷಿ ಕಾರ್ಮಿಕರಿಗೆ, ಸ್ಥಳೀಯ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.