ಮೂಡಿಗೆರೆ : ಲಾಕ್‍ಡೌನ್ ಸಡಿಲಿಕೆಯಾದರೂ ಪ್ರಾರಂಭವಾಗದ ಖಾಸಗಿ ಬಸ್ಸುಗಳ ಸಂಚಾರ-ಗ್ರಾಮೀಣ ಭಾಗದ ಪ್ರಕಯಾಣಿಕರ ಪರದಾಟ…

338
firstsuddi

ಕೊಟ್ಟಿಗೆಹಾರ: ಲಾಕ್‍ಡೌನ್ ಅವಧಿ ಮುಗಿದು ಜನಜೀವನ ಯಥಾಸ್ಥಿತಿಗೆ ಮರುಳುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದು ಕೊಟ್ಟಿಗೆಹಾರದಿಂದ ಶೃಂಗೇರಿ, ಹೊರನಾಡು ಮಾರ್ಗವಾಗಿ ಖಾಸಗಿ ಬಸ್ಸುಗಳ ಸಂಚಾರ ಪ್ರಾರಂಭವಾಗದೇ ಇರುವುದರಿಂದ ಈ ಭಾಗದ ಪ್ರಯಾಣಿಕರು ಪರದಾಡುವಂತಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಸೀಮಿತ ಪ್ರಯಾಣಕರನ್ನು ಮಾತ್ರ ಬಸ್ಸಿನಲ್ಲಿ ಕರೆದ್ಯೊಯುವಂತೆ ಸರ್ಕಾರ ನಿಯಮ ರೂಪಿಸಿರುವುದರಿಂದ ಖಾಸಗಿ ಬಸ್ಸು ಸಂಚಾರ ಪ್ರಾರಂಭಿಸಿದರೆ ನಷ್ಟ ಅನುಭವಿಸುವ ಸಾಧ್ಯತೆ ಇರುವುದರಿಂದ ಖಾಸಗಿ ಬಸ್ಸು ಮಾಲೀಕರು ಬಸ್ಸು ಸಂಚಾರ ಪ್ರಾರಂಭಿಸಲು ಮುಂದಾಗುತ್ತಿಲ್ಲ.
ಇದರಿಂದಾಗಿ ಕೊಟ್ಟಿಗೆಹಾರ, ಬಾಳೂರು, ಮಾಲಿಂಗನಾಡು, ಕಳಸ, ಹೊರನಾಡು ಬಾಳೆಹೊನ್ನೂರು ಮುಂತಾದ ಗ್ರಾಮೀಣ ಭಾಗದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಬಸ್ಸು ಸಂಚಾರ ಇಲ್ಲದೇ ಈ ಭಾಗದ ಪ್ರಯಣಿಕರು ಖಾಶಗಿ ಬಾಡಿಗೆ ವಾಹನಗಳ ಮೊರೆ ಹೋಗಿದ್ದು ದುಪ್ಪಟ್ಟು ಬಾಡಿಗೆ ಹಣ ನೀಡಿ ಸಂಚರಿಸುವಂತಾಗಿದೆ. ದಿನನಿತ್ಯ ದೂರದೂರುಗಳಿಗೆ ಪ್ರಯಾಣಿಸುತ್ತಿದ್ದ ಉದ್ಯೋಗಿಗಳು, ಅಂಗಡಿಗಳಲ್ಲಿ ಕೆಲಸ ಮಾಡುವವರು, ವರ್ತಕರು ಬಾಡಿಗೆ ವಾಹನಗಳನ್ನು ಅವಲಂಬಿಸಿದ್ದು ದುಡಿದ ಹಣ ಬಾಡಿಗೆ ನೀಡುವುದಕ್ಕೆ ಸರಿಯಾಗುತ್ತಿದೆ.
ಖಾಸಗಿ ಬಸ್ ಸಂಚಾರ ಆರಂಭವಾಗದೇ ಇರುವುದರಿಂದ ಸರ್ಕಾರ ಸರ್ಕಾರಿ ಬಸ್ ಸಂಚಾರವ್ನು ಈ ಮಾರ್ಗವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಕುಗ್ರಾಮಗಗಳಲ್ಲಿ ಇರುವವರು ಬಸ್ ಇಲ್ಲದೇ ಕಿಮೀಗಟ್ಟಲೇ ನಡೆದುಕೊಂಡು ಮುಖ್ಯರಸ್ತೆಗೆ ಬರಬೇಕಾಗಿದೆ. ತುತು ಸಂದರ್ಭದಲ್ಲಿ ಸಕಾಲಕ್ಕೆ ತಲುಪಲಾಗದೇ ತೊಂದರೆ ಅನುಭವಿಸುವಂತಾಗಿದ್ದು ಸರ್ಕಾರಿ ಬಸ್ಸ ಂಚಾರ ಆರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ ಬಾಲಕೃಷ್ಣ, ಸರ್ಕಾರ, ಖಾಸಗಿ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಸೀಮಿತಗೊಳಿಸಿದೆ. ಸೀಮಿತಗೊಳಿಸಿದರೂ ಕೂಡ ತೆರಿಗೆಯನ್ನು ಪೂರ್ಣವಾಗಿ ಕಟ್ಟಬೇಕು. ಈ ನಿಯಮಗಳಿಗೆ ವಿನಾಯತಿ ಕೊಡಬೇಕು. ಈ ಬಗ್ಗೆ ಸೋಮವಾರ ಮುಖ್ಯಮಂತ್ರಿಗಳನ್ನು ಬೇಟಿ ಮನವಿ ಸಲ್ಲಿಸಲಾಗುವುದು. ಜಿಲ್ಲಾಡಳಿತದಿಂದ ಖಾಸಗಿ ಬಸ್ ಸಂಚಾರ ಆರಂಭಿಸಲು ಅಧಿಕೃತವಾಗಿ ಪತ್ರ ಬಂದಿಲ್ಲ. ಮುಖ್ಯಮಂತ್ರಿಗಳ ಬೇಟಿಯ ನಂತರ ಖಾಸಗಿ ಬಸ್ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್‍ಆರ್‍ಟಿಸಿ ಡಿಸಿ ವೀರೇಶ್ ಅವರು ‘ಬಾಳೆಹೊನ್ನೂರು ಕೇಂದ್ರವಾಗಿಟ್ಟುಕೊಂಡು ಗುರುವಾರದಿಂದ ಎನ್‍ಆರ್‍ಪುರ, ಶೃಂಗೇರಿ, ಕೊಪ್ಪ, ಕಳಸ, ಕೊಟ್ಟಿಗೆಹಾರಕ್ಕೆ 8 ಸರ್ಕಾರಿ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ. ಪ್ರಯಾಣಿಕರು ಹೆಚ್ಚಿದ್ದರೆ ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್ ಸಂಚಾರ ಆರಂಭಿಸುವ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ.