ಮೂಡಿಗೆರೆ : ವ್ಯಕ್ತಿಯ ಕೌಶಲ್ಯಗಳನ್ನು ಎತ್ತಿ ತೋರಿಸುವ ಕಾರ್ಯಕ್ರಮವೇ ವಿಶ್ವಕರ್ಮ ಜಯಂತಿ : ಚಂದ್ರಯ್ಯ ಆಚಾರ್.

442
firstsuddi

ಮೂಡಿಗೆರೆ: ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಇಂದು ಸರಳವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಸಮುದಾಯದ ಸಂಘದ ಅಧ್ಯಕ್ಷರಾದ ಎಂ,ಹೆಚ್,ವಿಠಲಾಚಾರ್ ರವರು ಕಾರ್ಯಕ್ರಮದ ಕುರಿತು ಮಾತನಾಡಿ ನಮ್ಮ ಮಲೆನಾಡಿನಲ್ಲಿ ಹಾಗು ಕರ್ನಾಟಕದಾದ್ಯಂತ ಕೆಲವು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಇಲ್ಲಿನ ಜನರು ತುಂಬಾ ಕಷ್ಟಕರವಾದ ಜೀವನವನ್ನು ನಡೆಸುತ್ತಿದ್ದು, ಹಾಗು ಅವರಿಗೆ ಪರಿಹಾರದ ಕುರಿತು ಸರ್ಕಾರ ವಿವಿಧ ಮಟ್ಟದಲ್ಲಿ ಕಾರ್ಯಕ್ರಮವನ್ನು ರೂಪಿಸುತ್ತಿರುವುದರಿಂದ ಧನದ ಕ್ರೂಡಿಕರಣ ಮಾಡುತ್ತಿರುವ ಹಿನ್ನಲೆಯಲ್ಲಿ ನಾವು ಹಾಗು ನಮ್ಮ ರಾಜ್ಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಇಂದು ಸರಳವಾಗಿ ನಾವೆಲ್ಲರು ಕಾರ್ಯಕ್ರಮವನ್ನು ಆಚರಿಸಿ ಸರಳತೆಯನ್ನ ಮೆರೆಯುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಚಂದ್ರಯ್ಯ ಆಚಾರ್ ಅವರು, ಭೂಲೋಕದಲ್ಲಿ ಮಾನವನಿಗೆ ಬದುಕಲು ವಿವಿದ ಅಗತ್ಯತೆಗಳು ಬೇಕಾಗಿದ್ದು, ಅದರಲ್ಲಿಯೂ ವ್ಯಕ್ತಿಯ ವೈವಿಧ್ಯತೆ, ಕೌಶಲ್ಯ, ಸರಳತೆ, ವೇದ ಪುರಾಣಗಳಲ್ಲಿ ವಿಶೇಷ ಅರ್ಥವನ್ನು ಕೊಡುವ ಹಾಗು ಪ್ರವಾಸಿಗಳನ್ನು ಆಕರ್ಶಿಸುವ ಎಲ್ಲಾ ಕೆಲಸದಲ್ಲೂ ಒಬ್ಬ ವಿಶ್ವಕರ್ಮರ ಪರಿಶ್ರಮವಿದ್ದು, ಅದನ್ನು ಹಾಗು ಅವರು ಮಾಡಿದ ಸಾಧನೆಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಇಂದು ಇಂತಹ ಗೌರವಯುತ ಶಿಲ್ಪಕಲೆಗಳು ಹಾಗು ಪ್ರತಿಯೊಂದು ಮನುಷ್ಯನು ಬದುಕಲು ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಒದಗಿಸುವಲ್ಲಿ ಈ ಸಮುದಾಯವು ನಮ್ಮ ಪ್ರಪಂಚಕ್ಕೆ ಒಂದು ಮಾದರಿಯಾಗಿದ್ದು, ಅದು ಕೇವಲ ನಮ್ಮ ದುಡಿಮೆಗೆ ಬಳಸದೇ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುವ ರೀತಿ ನಾವೆಲ್ಲರೂ ಸೇರಿ ವಿಶ್ವಕರ್ಮರ ಈ ಕೊಡುಗೆ ಬೆಳೆಸುವ ನಿಟ್ಟಿನಲ್ಲಿ ಇರಬೇಕೆಂದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಮೂಡಿಗೆರೆ ವಿಶ್ವಕರ್ಮ ಸಮುದಾಯದ ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಮೇಶ್, ನಾವೆಲ್ಲರೂ ಸರಳವಾಗಿ ಆಚರಣೆ ಮಾಡುವ ಸಂದರ್ಭದಲ್ಲಿ ನಮ್ಮ ಜೊತೆ ಸರ್ಕಾರದ ಭಾಗವಾಗಿರುವ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದರೆ ಈ ಕಾರ್ಯಕ್ರಮಕ್ಕೆ ಒಂದೊಳ್ಳೆ ಅರ್ಥ ಬರುತ್ತದೆ. ಆದರೆ ಇಂತಹ ಸರಳವಾದ ಹಾಗು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಇಲ್ಲಿನ ಜನಪ್ರತಿನಿಧಿಗಳು ಹಾಗು ಪ್ರಮುಖ ರಾಜಕಾರಣಿಗಳು ಯಾರು ಸಹ ಬರದೇ ನಮ್ಮ ಕಾರ್ಯಕ್ರಮವನ್ನು ಕಡೆಗಣಿಸಿದ್ದಾರೆ. ಇದರಿಂದ ನಮ್ಮ ಸಮುದಾಯಕ್ಕೆ ಬೇಸರವಾಗಿದೆ. ಕೇವಲ ಸರ್ಕಾರದಿಂದ ಮಾಡುತ್ತಿರುವ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾವ ರಾಜಕಾರಣಿಗೂ ಅಗತ್ಯವಿಲ್ಲದಂತೆ ತೋಚುತ್ತಿದೆ. ಹೀಗೆ ಮುಂದುವರಿದರೆ ನಮಗೂ ನಮ್ಮ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಮ್ಮ ಎಲ್ಲಾ ಸಮುದಾಯದ ಮುಖಂಡರನ್ನು ಸೇರಿಸಿ ಕಾರ್ಯಕ್ರಮ ಮಾಡಲು ನಮಗೂ ಬರುತ್ತದೇ ಇದರಿಂದ ಮುಂದೊದು ದಿನ ನೀವು ಇದರಿಂದ ಪಾಠ ಕಲಿಯಬೇಕಾಗುತ್ತದೆ. ಎಂದು ಕಾರ್ಯಕ್ರಮಕ್ಕೆ ಬಾರದ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರು ಹಾಗು ತಾಲ್ಲೂಕು ದಂಡಾಧಿಕಾರಿಗಳಾದಂತಹ ರಮೇಶ್ ಹೆಚ್.ಎಂ. ಮಾತನಾಡಿ ಸರ್ಕಾರ ಜಯಂತಿಯನ್ನು ಆಚರಣೆ ಮಾಡಲು ತೀರ್ಮಾನ ಕೈಗೊಂಡ ಹಿನ್ನಲೆಯಲ್ಲೆ ಇದನ್ನು ನಾವುಗಳು ಆಚರಣೆಯ ನೆಪದಲ್ಲಿ ಅದು ಕೇವಲ ಜಾತಿ ಜಾತಿಗೆ ಸಂಬಂಧಿಸಿದ ನ್ಯೂನತೆಗಳನ್ನು ಹುಡುಕುವ ಬದಲು ನಾವೆಲ್ಲರೂ ಭಾರತಿಯರೆಂಬ ನಿಟ್ಟಿನಲ್ಲಿ ಇಂತಹ ಆಚರಣೆಯಲ್ಲಿ ಕೇವಲ ಜಾತಿ ಹಾಗು ಧರ್ಮವನ್ನು ಹುಡುಕುವ ಬದಲು ಒಬ್ಬ ವ್ಯಕ್ತಿಯ ಕೌಶಲ್ಯ ಹಾಗು ಅವರವರ ಜೀವನದ ಶೈಲಿಯನ್ನು ಪುನರುಚ್ಚಿಸುವ ಒಂದು ಮಹೊನ್ನತ ಕಾರ್ಯವಾಗಬೇಕಾಗಿದೆ ಎಂದರು. ನನಗೆ ಇದುವರೆಗೂ ವಿಶ್ವಕರ್ಮ ಜಯಂತಿ ಆಚರಿಸುವ ನಿಟ್ಟಿನಲ್ಲಿ ಕೆಲವು ಬೇಡಿಕೆಗಳು ಹಾಗು ಮೌಖಿಕವಾಗಿ ಕೆಲವು ಅಭಿಪ್ರಾಯಗಳು ನನ್ನ ಗಮನಕ್ಕೆ ಬಂದಿರುತ್ತದೆ. ಅದರಂತೆ ಅದರಲ್ಲಿ ʼವಿಶ್ವಕರ್ಮ ಜಯಂತಿ, ಎಂಬ ಹೆಸರಿನ ಬದಲು ʼವಿಶ್ವಕರ್ಮ ಮಹೊತ್ಸವ, ಎಂದು ಹೆಸರು ಮಾರ್ಪಾಡು ಮಾಡುವ ಬಗ್ಗೆ ಕೆಲವು ಅಭಿಪ್ರಾಯಗಳು ಬಂದಿದ್ದು, ಇದರ ಬಗ್ಗೆ ನಮ್ಮ ಕಛೇರಿಗೆ ಇದಕ್ಕೆ ಸಂಬಂಧಿಸಿದ ಮನವಿಯನ್ನು ಕೊಟ್ಟಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಅಭಿಪ್ರಾಯವನ್ನು ಕಳಿಸಿಕೊಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಮುದಾಯದ ವತಿಯಿಂದ ರಾಜ್ಯಾದ್ಯಂತ ಪ್ರಕೃತಿ ವಿಕೋಪದ ಸಂತ್ರಸ್ಥರಿಗೆ ನೆರವಾಗಲು ಕಾರ್ಯಕ್ರಮದ ವತಿಯಿಂದ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10,000 ರೂಗಳ ಸಹಾಯ ಧನದ ಚೆಕ್ಕನ್ನು ತಹಾಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಗುರುರಾಜ್ ಆಲ್ಮಟ್ ನಿರೂಪಣೆಯನ್ನು ಮಾಡಿದರು ಹಿರಿಯ ಶಿಲ್ಪಿಗಳಾದ ಪಾಪಣ್ಣ ಆಚಾರ್,ಹಾಗು ಹಿರಿಯರಾದ ಪುರುಷೋತ್ತಮ ಆಚಾರ್, ಜಿ.ಡಿ.ಮಂಜುನಾಥ್ ಆಚಾರ್, ಹಾಗು ಇನ್ನಿತರರಿದ್ದರು.