ಮೂಡಿಗೆರೆ : ಶ್ರೀ ಶನೇಶ್ವರ ಸೇವಾ ಸಮಿತಿ ಇವರ ವತಿಯಿಂದ ಮೇಗಲಪೇಟೆಯಲ್ಲಿರುವ ಶನೇಶ್ವರ ದೇವಾಲಯದ 7ನೇ ವರ್ಷದ ವಾರ್ಷಿಕ ಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು ಇಂದು ಬೆಳಗ್ಗನಿಂದಲೇ ಗಣಪತಿ ಹೋಮ, ನವಗ್ರಹ ಪೂಜೆ, ದುರ್ಗಾಹೋಮಾ, ಸೇರಿದಂತೆ ವಿವಿಧ ಪೂಜೆಗಳು ನೆರವೇರಿಸಲಾಯಿತು. ಯೋಗೇಶ್ ಭಟ್, ಹನುಮನಹಳ್ಳಿ ಇವರ ನೇತೃತ್ವದಲ್ಲಿ ಶನೇಶ್ವರನಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನೂರಾರು ಭಕ್ತರು ಪಾಲ್ಗೊಂಡಿದ್ದರು. ಇದೇ ವೇಳೆ ಶ್ರೀ ಶನೇಶ್ವರ ಸೇವಾ ಸಮತಿಯ ಅಧ್ಯಕ್ಷ ಶ್ರೀಕಾಂತ್, ಗೌರವಾಧ್ಯಕ್ಷ ಕೆ.ವೆಂಕಟೇಶ್, ಉಪಧ್ಯಕ್ಷ ಶ್ರೀನಿವಾಸ್ ಕುನ್ನಳ್ಳಿ, ಖಜಾಂಚಿ ನರೇಂದ್ರಶೆಟ್ಟಿ, ಬಾಲಕೃಷ್ಣ, ಶಿವಕುಮಾರ್, ಹರೀಶ್ ಕಡುವಳ್ಳಿ, ಹಳೇಕೋಟೆ ಸತೀಶ್ ಹಾಗೂ ಮಾಜಿ ಸಚಿವೆ ಮೋಟಮ್ಮ, ರಾಘವೇಂದ್ರ ಕೆಸವಳಲು, ಕಣಚೂರು ಪ್ರದೀಪ್, ರವಿ ಅಡ್ಯಾಂತಾಯ, ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.










