ಮೂಡಿಗೆರೆ : ಸರ್ಫೇಸಿ ಕಾಯ್ದೆ ತಿದ್ದುಪಡಿಗೆ ಯುವ ಜನತಾ ದಳ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ…

113
firstsuddi

ಮೂಡಿಗೆರೆ : ಸರ್ಫೇಸಿ ಕಾಯ್ದೆ ತಿದ್ದುಪಡಿಸುವಂತೆ ಯುವ ಜನತಾ ದಳ ವತಿಯಿಂದ ಇಂದು ಮಾಡಿಗೆರೆ ತಾಲ್ಲುಕು ಕಚೇರಿಯಲ್ಲಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರು, ಹೈಕೋರ್ಟ್ ಹೊರಡಿಸಿರುವ ಸರ್ಫೇಸಿ ಕಾನೂನು ರೈತಾಪಿ ವರ್ಗದವರಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಬ್ಯಾಂಕುಗಳು ಹೈಕೋರ್ಟ್ ಆದೇಶವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಈ ಕಾನೂನಿನ ಪ್ರಕಾರ ರೈತರ ಆಸ್ತಿಗಳನ್ನು ಹರಾಜು ಹಾಕಲು ಬ್ಯಾಂಕುಗಳು ವ್ಯವಸ್ಥಿತವಾಗಿ ಸಜ್ಜಾಗಿವೆ. ಇದನ್ನು ಜನತಾದಳ ಸಂಪೂರ್ಣ ಖಂಡಿಸುತ್ತದೆ. ಈ ಕೂಡಲೇ ಸರ್ಫೇಸಿ ಕಾಯ್ದೆಯನ್ನು ತಿದ್ದಪಡಿ ಮಾಡಿ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷ ವಿನಯ್ ರಾಜ್, ಮಾಡಿಗೆರೆ ತಾಲ್ಲುಕು ಯುವ ಜನತಾ ದಳದ ಅಧ್ಯಕ್ಷ ಸಂದೀಪ್, ಪ್ರಕಾಶ್, ಬಕ್ಕಿ  ಪ್ರಸಾದ್, ನೂತನ್ ಬೆಟ್ಟಗೆರೆ, ರತನ್ ಊರುಬಗೆ, ಮನು ಮೂಲಳ್ಳಿ ಸೇರಿದಂತೆ ಜನನತಾದಳದ ಕಾರ್ಯಕರ್ತರು ಇದ್ದರು.