ಕೊಟ್ಟಿಗೆಹಾರ : ಸುಂಕಸಾಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಭೇಟಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಲೆಯ ಶಿಕ್ಷಕ ಕಾಂತರಾಜ್ ಅವರ ಶ್ರಮದಿಂದಾಗಿ ಶಾಲೆಗೊಂದು ಹೊಸ ರೂಪ ಬಂದಿದೆ. ಇಂತಹ ಸುಂದರವಾದ ಪರಿಸರವನ್ನು ನಿರ್ಮಾಣ ಮಾಡುವುದರಿಂದ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗುತ್ತದೆ. 33 ಲಕ್ಷ ವೆಚ್ಚದಲ್ಲಿ 3 ಕೊಠಡಿ ನಿರ್ಮಿಸಲಾಗಿದೆ. ತಾ.ಪಂಯಿಂದ ಶಾಲಾಭಿವೃದ್ದಿಗೆ 1 ಲಕ್ಷ ಅನುಧಾನ ಬಂದಿದ್ದು ಶಾಲೆಯ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಕಾಂತರಾಜ್, ಬಿಜೆಪಿ ಯುವ ಮುಖಂಡ ಪರೀಕ್ಷಿತ್ ಜಾವಳಿ, ಸ್ಥಳೀಯರಾದ ರವಿ ಬಲಿಗೆ, ಶ್ರೀಮೂರ್ತಿ ಮುಂತಾದವರು ಇದ್ದರು.










