ಮೂಡಿಗೆರೆ :ಹುಲಿ ದಾಳಿಗೆ ಜಾನುವಾರು ಸಾವು.

577

 ಕೊಟ್ಟಿಗೆಹಾರ:  ಹುಲಿ ದಾಳಿಗೆ ಜಾನುವಾರೊಂದು ಬಲಿಯಾದ ಘಟನೆ ಬಿ ಹೊಸಳ್ಳಿಯಲ್ಲಿ ನಡೆದಿದೆ.
ಬಿ ಹೊಸಳ್ಳಿಯ ಪ್ರಸನ್ನ ಎಚ್.ಎಸ್ ಎಂಬುವವವರಿಗೆ ಸೇರಿದ ಎಮ್ಮೆಯೊಂದು ಬಿ ಹೊಸಳ್ಳಿಯ ಗೋಮಾಳ ಪ್ರದೇಶದಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಮಂಗಳವಾರ ರಾತ್ರಿ ಹುಲಿ ದಾಳಿಗೆ ಬಲಿಯಾಗಿದೆ. ಈ ಭಾಗದಲ್ಲಿ ಇದುವರೆಗೆ ಸುಮಾರು 6 ಜಾನುವಾರುಗಳು ಹುಲಿದಾಳಿಗೆ ಬಲಿಯಾಗಿದ್ದು ಹುಲಿ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪವಲಯ ಅರಣ್ಯಾಧಿಕಾರಿ ಉಮೇಶ್, ಹುಲಿ ದಾಳಿಯಿಂದ ಜಾನುವಾರೊಂದು ಮೃತಪಟ್ಟ ಘಟನೆ ಗಮನಕ್ಕೆ ಬಂದಿದ್ದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.