ಮೂಡಿಗೆರೆ : ಹುಲಿ ದಾಳಿಗೆ ಮೂರು ಜಾನುವಾರುಗಳು ಬಲಿ…

87
firstsuddi

ಕೊಟ್ಟಿಗೆಹಾರ :ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಫಿ ಎಸ್ಟೇಟ್‍ವೊಂದರಲ್ಲಿ ನಿನ್ನೆ ರಾತ್ರಿ ಹುಲಿ ದಾಳಿಗೆ ಮೂರು ಜಾನುವಾರುಗಳು ಬಲಿಯಾಗಿವೆ.

ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೌಸೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರತಿಬೈಲ್, ಕನ್ನಗೆರೆ ಸುತ್ತಮುತ್ತ ಎರಡು ಹುಲಿಗಳು ಬೀಡು ಬಿಟ್ಟಿದ್ದು ಕಳೆದ ಕೆಲ ತಿಂಗಳಲ್ಲಿ ಹತ್ತಾರು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿವೆ. ಹುಲಿ ಭೀತಿಯಿಂದ ಕಾಫಿ ತೋಟಗಳಿಗೆ ಕಾರ್ಮಿಕರು, ಕಾಫಿ ಬೆಳೆಗಾರರು ಭಯದಿಂದಲೇ ಹೋಗುವಂತಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಹುಲಿ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.