ಮೂಡಿಗೆರೆ : ಹುಲಿ ದಾಳಿಗೆ ಹಸು ಬಲಿ…

109
firstsuddi

ಮೂಡಿಗೆರೆ : ತಾಲೂಕಿನ ತಳವರ ಗ್ರಾಮದಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಮೃತಪಟ್ಟಿದೆ. ಕಳೆದ ಕೆಲ ದಿನಗಳಿಂದ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಜಾನುವಾರುಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ತಳವರ ನಿವಾಸಿ ಶಮಂತ್ ಗೌಡ ಎಂಬುವವರಿಗೆ ಸೇರಿದ ಹಸುವನ್ನು ಮೇಯಲು ಬಿಡಲಾಗಿತ್ತು. ಭಾನುವಾರ ಮದ್ಯಾಹ್ನದ ಬಳಿಕ ಹುಲಿ ದಾಳಿ ನಡೆಸಿ ಕೊಂದಿದೆ ಎನ್ನಲಾಗಿದ್ದು. ಒಂದು ವಾರದ ಹಿಂದೆಯಷ್ಟೇ ಬಣಕಲ್ ಸಮೀಪದ ಹಳೆಹಳ್ಳಿ ಗ್ರಾಮದಲ್ಲಿ ಎರಡು ಹಸುಗಳು ಬಲಿಯಾಗಿದ್ದು, ಒಂದೆಡೆ ಆನೆ ಇನ್ನೊಂದು ಕಡೆ ಹುಲಿ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.