ಮೂಡಿಗೆರೆ : ಹೃದಯಾಘಾತದಿಂದ ಜನಪ್ರಿಯ ವೈದ್ಯ ರಾಜೇಶ್ ಹೆಗ್ಡೆ ನಿಧನ…

737
firstsuddi

ಮೂಡಿಗೆರೆ : ದಂತವೈದ್ಯ ಡಾ. ರಾಜೇಶ್ ಹೆಗ್ಡೆ ಅವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಪಟ್ಟಣದಲ್ಲಿ ಹಲವು ವರ್ಷಗಳಿಂದ ದಂತ ಚಿಕಿತ್ಸಾಲಯ ನಡೆಸಿಕೊಂಡು ಬರುತ್ತಿದ್ದರು. ವೈದ್ಯ ರಾಜೇಶ್ ಹೆಗ್ಡೆ ಅವರು ವೈದ್ಯ ವೃತ್ತಿಯೊಂದಿಗೆ ಲಯನ್ಸ್ ಸಂಸ್ಥೆಯಲ್ಲಿ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ, ಎಂ.ಕೆ. ಪ್ರಾಣೇಶ್, ಮಾಜಿ ಸಚಿವೆ ಮೋಟಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜೀತ್‍ಕುಮಾರ್, ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಭಾರತೀ ರವೀಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನುಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಗ್ಗಲಮಕ್ಕಿ ಅಭಿಜಿತ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಲಯನ್ಸ್ ಸಂಸ್ಥೆಯ ಜಿ.ಪಿ. ಪ್ರಕಾಶ್, ಪತ್ರಕರ್ತರಾದ ಮೊದಲಮನೆ ಸುಧೀರ್, ಸಂತೋಷ್ ಅತ್ತಿಗೆರೆ, ಪುನೀತ್, ಸುಂದರ್ ಬಂಗೇರ, ಎಂ.ಜಿ.ಎಂ ಆಸ್ಪತ್ರೆ ಡಾ. ಸಂತೋಷ್, ಡಾ. ಸುನೀಲ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.