ಮೂವರನ್ನ ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧನಿಗೆ ಜೀವಾವಧಿ ಶಿಕ್ಷೆ…

64
firstsuddi

ಹುಬ್ಬಳ್ಳಿ : ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧನಿಗೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಿ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.

ಬೆಟದೂರು ಗ್ರಾಮದ ಶಂಕ್ರಪ್ಪ ತಿಪ್ಪಣ್ಣ ಜೀವಾವಧಿ ಶಿಕ್ಷೆಗೀಡಾದ ಅಪರಾಧಿ. 2010 ರಲ್ಲಿ ನಡೆದಿದ್ದ ಭೀಕರ ಹತ್ಯೆ ಘಟನೆ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಮತ್ತು ಜಿಲ್ಲಾ ಸತ್ತ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಎನ್.ಬಿರಾದಾರ್ ಅವರು ಯೋಧನಿಗೆ 24 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿದಂತೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಲು ಆದೇಶ ನೀಡಿದ್ದಾರೆ.

ಪ್ರಕರಣದ ಹಿನ್ನಲೆ : 2010ರಲ್ಲಿ ಮದುವೆಯಾಗಿದ್ದ ಶಂಕ್ರಪ್ಪ ತಿಪ್ಪಣ್ಣ ಮತ್ತು ಪತ್ನಿ ನಡುವೆ ಜಗಳ ನಡೆದಿದ್ದು, ಹೆಂಡತಿ ತವರು ಸೇರಿದ್ದಳು. ಇದಕ್ಕೆ ತನ್ನ ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಕುಟುಂಬದವರೇ ಕಾರಣ ಎಂದು ಶಂಕ್ರಪ್ಪ ತಿಳಿದುಕೊಂಡಿದ್ದನು. ಇದರ ಜೊತೆಗೆ ನಗರದಲ್ಲಿರುವ ತಾಯಿಯ ಆಸ್ತಿಯೂ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ಸಹಕರಿಸಲಿಲ್ಲ ಎಂಬ ದ್ವೇಷದಿಂದ ಅಕ್ರಮವಾಗಿ ತಂದಿದ್ದ ಪಿಸ್ತೂಲ್ ಇಟ್ಟುಕೊಂಡು 20 ಆಗಸ್ಟ್ 2010 ರಂದು ಮಧ್ಯರಾತ್ರಿ ಯಲ್ಲಪ್ಪನ ಮನೆಗೆ ತೆರಳಿದ್ದ ಶಂಕ್ರಪ್ಪ ಬೆಟದೂರು ಗ್ರಾಮದ ಯಲ್ಲಪ್ಪ ಭಜಂತ್ರಿ (38), ಸೋಮಪ್ಪ ಭಜಂತ್ರಿ (11), ಐಶ್ವರ್ಯ ಭಜಂತ್ರಿ (9)ಗೆ ಬಂದೂಕಿನಿಂದ ಗಂಡು ಹಾರಿಸಿ ಹತ್ಯೆ ಮಾಡಿ ಮದನಕುಮಾರ ಎಂಬಾತನನ್ನು ಗಾಯಗೊಳಿಸಿದ್ದ. ಈ ವೇಳೆ ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು.