ಮೃತ ಮಹಿಳೆಯ ಖಾತೆಯಿಂದ 19 ಸಾವಿರ ರೂ. ಹಣ ಎಗರಿಸಿದ ಅಂಚೆ ಕಚೇರಿಯ ಅಧಿಕಾರಿಗಳು!

140
First suddi

ಮಂಡ್ಯ: ಹತ್ತು ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ವಿಜಯಾಂಬ ಅವರ ಹೆಸರಲ್ಲಿ ಅಂಚೆ ಕಚೇರಿಯ ಖಾತೆಯೊಂದರಲ್ಲಿದ್ದ 19 ಸಾವಿರ ರೂ. ಹಣ ಎಗರಿಸಿರುವ ಘಟನೆ ಮಂಡ್ಯ ಜಿಲ್ಲೆ ಕೆರಗೊಡು ಗ್ರಾಮದ ಅಂಚೆ ಕಚೇರಿಯಲ್ಲಿ ನಡೆದಿದೆ.
ವಿಜಯಾಂಬ ಜೂನ್ 18-2011 ರಂದು ಮೃತಪಟ್ಟಿದ್ದರು. ಇದಾಗಿ ಆರೇಳು ವರ್ಷದ ನಂತರ ಮನೆ ಶುಚಿಗೊಳಿಸುವ ವೇಳೆ ಆಕೆಯ ಅಂಚೆ ಕಚೇರಿ ಖಾತೆಯ ಪಾಸ್ ಬುಕ್ ದೊರಕಿದೆ. ಈ ಖಾತೆಯಲ್ಲಿ ಹಣ ಇರುವ ವಿಚಾರ ತಿಳಿದ ಆಕೆಯ ಕುಟುಂಬಸ್ಥರು ವಿಜಯಾಂಬ ಅವರ ಡೆತ್ ಸರ್ಟಿಫಿಕೇಟ್ ತೆಗೆದುಕೊಂಡು ಅಂಚೆ ಕಚೇರಿಗೆ ಹೋಗಿ ಹಣ ವಿತ್ ಡ್ರಾ ಮಾಡಿಕೊಡುವಂತೆ ಕೇಳಿದ್ದಾರೆ. ಆದರೆ ಅವರ ಖಾತೆಯಲ್ಲಿದ್ದ ಹಣ ಡ್ರಾ ಆಗಿತ್ತು. ಈ ಬಗ್ಗೆ ಅಂಚೆ ಕಚೇರಿ ಅಧಿಕಾರಿಗಳನ್ನು ಕೇಳಿದರೆ ತಮಗೇನೂ ತಿಳಿದಿಲ್ಲ ಎಂದು ನುಣುಚಿಕೊಳ್ಳುತ್ತಿದ್ದರು.
ಈ ಬಗ್ಗೆ ಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ದೂರು ಸಲ್ಲಿಸಿದ್ದರು. ಆದರೆ ಈ ಪ್ರಕರಣ ಬೆಳಕು ಕಂಡು ಮೂರು ವರ್ಷಗಳಾಗಿದ್ದರೂ ಯಾವ ಬೆಳವಣಿಗೆ ಆಗದಿರುವುದಕ್ಕೆ ವಿಜಯಾಂಬ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.