ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರರಾದ ಮಲ್ಲಿಗೆ ಸುಧೀರ್.

77
firstsuddi

ಚಿಕ್ಕಮಗಳೂರು: ನಗರದ ಖ್ಯಾತ ಯುವಗಾಯಕ ಮಲ್ಲಿಗೆ ಸುಧೀರ್ ಅವರು ನಾಡ ಹಬ್ಬ ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಡ ಹಬ್ಬದ ಸರ ಉತ್ಸವ ಸಮಿತಿಯ ಆಹ್ವಾನದ ಮೇರೆಗೆ ತಮ್ಮ ಪುತ್ರ ಅಭಿಷೇಕ್ ಮತ್ತು ತಂಡದೊಂದಿಗೆ ನಿನ್ನೆ ಮೈಸೂರಿಗೆ ತೆರಳಿದ ಮಲ್ಲಿಗೆ ಸುಧೀರ್ ಅಲ್ಲಿನ ಕರ್ನಾಟಕ ಕಲಾಮಂದಿರದಲ್ಲಿ ಸಂಜೆ ಸಂಗೀತ ಗಾಯನ ಪ್ರಸ್ತುತಪಡಿಸಿದರು.

ಗಾನಯಾನದುದ್ದಕ್ಕೂ ಗಾನ ಗಾರುಡಿಗ ಡಾ. ಸಿ. ಅಶ್ವಥ್ ಅವರ ಗೀತೆಗಳನ್ನು ಮತ್ತು ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡುವ ಮೂಲಕ ಸಭಿಕರ ಮನ ಗೆದ್ದರು.