ಮೊಟ್ಟ ಮೊದಲ ಬಾರಿಗೆ ರೈಲಿನ ಮೂಲಕ 32 ಬಸ್​ಗಳ ಸಾಗಣೆ…

61
firstsuddi

ಹುಬ್ಬಳ್ಳಿ : ಬೆಂಗಳೂರು ವಿಭಾಗದ ದೊಡ್ಡಬಳ್ಳಾಪುರ ನಿಲ್ದಾಣದಿಂದ ಚಂಡೀಗಢ ನಗರಕ್ಕೆ ಮೊಟ್ಟ ಮೊದಲ ಬಾರಿಗೆ 32 ಬಸ್ ಗಳನ್ನ ರೈಲಿನ ಮೂಲಕ ಸಾಗಿಸಲಾಗುತ್ತಿದೆ. ಈ ಮೂಲಕ ನೈರುತ್ಯ ರೈಲ್ವೆ ಮತ್ತೊಂದು ಸಾಧನೆ ಮಾಡಿದೆ.

ಅಶೋಕ್ ಲೇಲ್ಯಾಂಡ್ ಬಸ್ ಗಳಾಗಿದ್ದು, ಹಿಮಾಚಲ ಪ್ರದೇಶ ರಾಜ್ಯ ಸಾರಿಗೆಯಲ್ಲಿ ಈ ಬಸ್ ಗಳನ್ನ ಬಳಸಲಾಗುತ್ತದೆ. 2021-22 ರಲ್ಲಿ ನೈರುತ್ಯ ರೈಲ್ವೆ 238 ರೈಲುಗಳಲ್ಲಿ ಟೊಯೊಟಾ, ಕಿಯಾ ಕಾರುಗಳು, ಸುಜುಕಿ ಟಿವಿಎಸ್ ಸ್ಕೂಟರ್ ಗಳನ್ನ ಭಾರತದ ವಿವಿಧ ಭಾಗಗಳಿಗೆ ಸಾಗಿಸಿತ್ತು.