ಯುವಜನತೆ ಕೌಶಲ್ಯ ಬೆಳೆಸಿಕೊಳ್ಳಬೇಕು : ಕೆ.ಎನ್.ರಮೇಶ್.

77
firstsuddi

ಚಿಕ್ಕಮಗಳೂರು : ಯುವಜನತೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಉದ್ಯಮಿಗಳಾಗುವ ಮೂಲಕ ದೇಶದ ಅಭಿವೃದ್ದಿಗೆ ಕಾರಣರಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಲಹೆ ನೀಡಿದರು.

ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಛೇರಿಯಲ್ಲಿ ಯುವಜನತೆಗಾಗಿ ಇಂದು ಏರ್ಪಡಿಸಿದ್ದ ಕೌಶಲ್ಯಾಭಿವೃದ್ದಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿಂದು ನಾಲ್ಕನೇ ಕೈಗಾರಿಕಾ ಕ್ರಾಂತಿ ನಡೆಯುತ್ತಿದೆ, ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ, ನಾವು ಆಧುನಿಕ ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕದಿದ್ದರೆ ಹಿಂದುಳಿಯುತ್ತೇವೆ ಎಂದರು.

ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕು, ಓದಿದವರಿಗೆಲ್ಲರಿಗೂ ಇಂದು ಉದ್ಯೋಗ ದೊರಕುವ ಸಂಭವವಿಲ್ಲ ಹಾಗಾಗಿ ಯುವಜನತೆ ಉದ್ಯೋಗಕ್ಕೆ ಕಾಯದೇ ಸ್ವಂತ ಉದ್ಯೋಗ ಕೈಗೊಳ್ಳಬೇಕು, ಉದ್ಯಮಿಗಳಾಗುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌವರಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಯುವಜನತೆ ಕೌಶಲ್ಯವನ್ನು ಬೆಳೆಸಿಕೊಂಡು ಉದ್ಯಮಿಗಳಾಗಿ ಆ ಮೂಲಕ ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಮಹೇಶ್ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಇಂಡಸ್ಟ್ರಿಯಲ್ ಎಸ್ಟೇಟ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ನ ನಿರ್ದೇಶಕಿ ಡಾ|| ಮಧುರಾಣಿ ಗೌಡ ಕೌಶಲ್ಯ ಬೆಳೆಸಿಕೊಳ್ಳುವ ಕುರಿತು ಯುವಜನತೆಗೆ ವಿವರಿಸಿದರು.
ಯಶೋಧಾ ಲಕ್ಷ್ಮಣಗೌಡ, ಸಂಸ್ಥೆಯ ನಿರ್ದೇಶಕರಾದ ಆನಂದ್‍ಕುಮಾರ್ ಶೆಟ್ಟಿ, ಡಾ|| ವಿನಾಯಕ, ಜಿತೇಂದ್ರ, ಎಂ.ಎಸ್.ವಿಜಯೇಂದ್ರ, ಶಾಂತಾರಾಮ್ ಹೆಗಡೆ, ಶಿವಣ್ಣ, ದೇವಪ್ರಸಾದ್, ನಿಂಗೇಗೌಡ ಉಪಸ್ಥಿತರಿದ್ದರು.