ಯುರೋಪ್​ನಿಂದ ಭಾರತಕ್ಕೆ ಬಂದ ಸೈಬೀರಿಯನ್ ಹುಲಿಗಳು…

63
firstsuddi

ಡಾರ್ಜಿಲಿಂಗ್(ಪಶ್ಚಿಮ ಬಂಗಾಳ): ಆಗ್ನೇಯ ಯುರೋಪ್‍ನ ಸೈಪ್ರಸ್‍ನ ಪಫೋಸ್ ಮೃಗಾಲಯದಿಂದ ಎರಡು ಸೈಬೀರಿಯನ್ ಹುಲಿಗಳನ್ನು ಭಾರತಕ್ಕೆ ಕರೆತರಲಾಗಿದೆ.

ಈ ಹುಲಿಗಳು ಭಾನುವಾರ ಪಶ್ಚಿಮಬಂಗಾಳದ ಪದ್ಮಜಾ ನಾಯ್ಡು ಝೂಲಾಜಿಕಲ್ ಪಾರ್ಕ್‍ಗೆ ಬಂದಿವೆ. ಲಾರಾ ಮತ್ತು ಅಕಮಾಸ್ ಎಂಬ ಸೈಬೀರಿಯನ್ ಹುಲಿಗಳು ಪದ್ಮಜಾ ನಾಯ್ಡು ಝೂಲಾಜಿಕಲ್ ಪಾರ್ಕ್‍ನ ಪ್ರಮುಖ ಆಕರ್ಷಣೆಯಾಗಲಿವೆ.

ಈ ಹುಲಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಈ ಸಂಬಂಧ ಅವುಗಳಿಗಾಗಿ ಎಂಟು ಪಶುವೈದ್ಯರು ಮತ್ತು ತಜ್ಞರ ತಂಡವನ್ನು ರಚಿಸಲಾಗಿದೆ. ಪ್ರಸ್ತುತ ಅವುಗಳನ್ನು ಮೃಗಾಲಯದ ರಾತ್ರಿ ಆಶ್ರಯದಲ್ಲಿ ಇರಿಸಲಾಗಿದೆ. ಮುಂದಿನ ಒಂದು ತಿಂಗಳ ಕಾಲ ಹುಲಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಎರಡೂ ಹುಲಿಗಳಿಗೂ ವಿಶೇಷ ಆಹಾರ ಪದ್ಧತಿ ಹಾಗೂ ವಿಟಮಿನ್ಸ್ ಮುಂದುವರಿಯುತ್ತದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ 1 ರಂದು ಪ್ರವಾಸಿಗರ ಕಣ್ಣಿಗೆ ಬೀಳಲಿವೆ. ಸೈಬೀರಿಯನ್ ಹುಲಿ ಬದಲು ಎರಡು ಕೆಂಪು ಪಾಂಡಾಗಳನ್ನು ಯುರೋಪ್ ಮೃಗಾಲಯಕ್ಕೆ ಕಳುಹಿಸಲಾಗಿದೆ.

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಾರ, ಭಾರತದಲ್ಲಿ ಎಲ್ಲಿಯೂ ಸೈಬೀರಿಯನ್ ಹುಲಿಗಳು ಇಲ್ಲ. ಈ ಸಂಬಂಧ ಎರಡು ಹುಲಿಗಳನ್ನು ಕರೆತರಲಾಗಿದೆ.