ರಜೆಗೆಂದು ಊರಿಗೆ ಬಂದಿದ್ದ ಯೋಧ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವು…

49
firstsuddi

ಧಾರವಾಡ : ರಜೆಗೆಂದು ಊರಿಗೆ ಬಂದಿದ್ದ ಯೋಧ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ಗರಗ-ಲೋಕೂರ ಕ್ರಾಸ್ ನಲ್ಲಿ ನಡೆದಿದೆ.

ತಾಲೂಕಿನ ಹಾರೋಬೆಳವಡಿ ಗ್ರಾಮದ ನಾಗಪ್ಪ ಉದ್ಮೀಶಿ (27) ಮೃತ ಸೈನಿಕ. ರಜೆ ಮೇಲೆ ತನ್ನ ಮನೆಗೆ ಬಂದಿದ್ದ ನಾಗಪ್ಪ ನಿನ್ನೆ ಸ್ನೇಹಿತರೊಂದಿಗೆ ಗರಗ ಮಡಿವಾಳೇಶ್ವರ ರಥೋತ್ಸವಕ್ಕೆ ಹೋಗಿದ್ದರು. ಗರಗ ಜಾತ್ರೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೇಲಿಂದ ಆಯತಪ್ಪಿ ಬಿದ್ದಿದ್ದಾರೆ. ನಾಗಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಅವರು ಸಾವನ್ನಪ್ಪಿದ್ದಾರೆ.

ನಾಗಪ್ಪ ಅವರಿಗೆ ಇನ್ನೂ 9 ವರ್ಷ ಸೇವಾವಧಿ ಇತ್ತು. ಅಲ್ಲದೇ ಇತ್ತೀಗಷ್ಟೇ ನಾಗಪ್ಪ ಒಂದು ಮಗುವಿನ ತಂದೆ ಕೂಡ ಆಗಿದ್ದರು. ಈ ಸೈನಿಕನ ಸಾವಿನಿಂದಾಗಿ ಹಾರೋಬೆಳವಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.