ರಮೇಶ್ ಜಾರಕಿಹೊಳಿ ದುಡ್ಡು ಮಾಡುವುದಕ್ಕೆ ರಾಜಕಾರಣ ಮಾಡುತ್ತಿದ್ದಾರೆ : ಸತೀಶ್ ಜಾರಕಿಹೊಳಿ.

227
firstsuddi

ಬೆಂಗಳೂರು : ರಮೇಶ್ ಜಾರಕಿಹೊಳಿ ಮತ್ತು ಅಳಿಯ ಅಂಬಿರಾವ್ ಪಾಟೀಲ್ ಅವರು ದುಡ್ಡು ಮಾಡುವುದಕ್ಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ತೀರಿಸಬೇಕು, ದುಡ್ಡು ಮಾಡುವುದಕ್ಕೆ 3-4 ವರ್ಷ ಬೇಕಾಗುತ್ತದೆ. ಹೀಗಾಗಿ ಬಿಜೆಪಿಗೆ ಸೇರಬೇಕು ಎಂದು ರಮೇಶ್ ಜಾರಕಿಹೊಳಿ ಕಳೆದ ವರ್ಷವೇ ಹೇಳಿದ್ದರು. ದುಡ್ಡು ಮಾಡುವುದೇ ಅವರ ಕೆಲಸ. ಬೇರೆಯವರು ಜನರ ಸೇವೆ ಮಾಡಲು ರಾಜಕಾರಣ ಮಾಡಿದರೇ, ರಮೇಶ್ ಜಾರಕಿಹೊಳಿ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡುವುದಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಗೋಕಾಕ್‍ನ ಸ್ಥಿತಿ ಬದಲಾವಣೆ ಆಗಬೇಕೆಂದರೆ ಶಾಸಕರು ಬದಲಾಗಬೇಕು. ಆಗ ಅಂಬೀರಾವ್ ಕೈಯಿಂದ ಅಧಿಕಾರ ತಪ್ಪುತ್ತದೆ. ರಮೇಶ್ ಜಾರಕಿಹೊಳಿ ಇರುವವರೆಗೂ ಅಧಿಕಾರ ಅಂಬಿರಾವ್ ಕೈಯಲ್ಲಿ ಇರುತ್ತದೆ. ದುಡ್ಡು ಮಾಡಿಕೊಂಡು ಸಾಲ ತೀರಿಸಿ ಮತ್ತೆ ಕಾಂಗ್ರೆಸ್‍ಗೆ ಬರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ಈಗ ರಮೇಶ್ ಕಾಂಗ್ರೆಸ್‍ಗೆ ಬರುವುದಿಲ್ಲ, ಮುಂದೆ ಬರಬಹುದು. ಜಾತ್ರೆಯಲ್ಲಿ ಕೋಣ ಕಡಿಯಲು ಐದು ದಿನ ಪೂರ್ವದಲ್ಲಿ ಸುಣ್ಣದ ನೀರು ಕುಡಿಸುತ್ತಾರೆ. ಅದೇ ರೀತಿ ತಪ್ಪಿ ರಮೇಶ್ ಸುಣ್ಣದ ನೀರನ್ನು ಕುಡಿದಿದ್ದಾರೆ ಎಂದು ಲೇವಡಿ ಮಾಡಿದರು.