ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಯತ್ನ…

53
firstsuddi

ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ ನಡೆದಿದ್ದು, ಅದೃಷ್ಟವಶಾತ್ ಪುಟಿನ್ ಅಪಾಯದಿಂದ ಪಾರಾಗಿದ್ದಾರೆ.

ಪುಟಿನ್ ಪ್ರಯಾಣಿಸುತ್ತಿದ್ದ ಕಾರ್ ಮೇಲೆ ಬಾಂಬ್ ದಾಳಿ ನಡೆದಿದೆ. ವರದಿಗಳ ಪ್ರಕಾರ, ವ್ಲಾಡಿಮಿರ್ ಪುಟಿನ್ ತನ್ನ ಅಧಿಕೃತ ನಿವಾಸಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಲಿಮೋಸಿನ್ ಕಾರ್ ನ ಮುಂದಿನ ಎಡಗಡೆಯ ಚಕ್ರ ಸ್ಫೋಟಗೊಂಡಿದೆ.

ಕೂಡಲೇ ಭದ್ರತಾ ಸಿಬ್ಬಂದಿ ಅಧ್ಯಕ್ಷರನ್ನು ಕಾರಿಂದ ಹೊರಗೆ ಎಳೆದು, ಬೆಂಗಾವಲು ಪಡೆಯಲ್ಲಿದ್ದ ಹೆಚ್ಚುವರಿ ಕಾರಿನಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಘಟನೆಯ ನಂತರ ಅಧ್ಯಕ್ಷರ ಅಂಗರಕ್ಷಕ ಮುಖ್ಯಸ್ಥ ಮತ್ತು ಇತರ ಹಲವಾರು ಜನರನ್ನು ಅಮಾನತುಗೊಳಿಸಲಾಗಿದೆ.