ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್-15 ಮಂದಿ ಕಾರ್ಮಿಕರ ದುರ್ಮರಣ…

142
firstsuddi

ಗುಜರಾತ್ : ರಸ್ತೆ ಬದಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಟ್ರಕ್ ಹರಿದು 15 ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಸೂರತ್‍ನ ಕಿಮ್ ರಸ್ತೆಯಲ್ಲಿ ನಡೆದಿದೆ. ಟ್ರಕ್ ಮೊದಲಿಗೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆ ಬದಿ ಮಲಗಿದ್ದ ರಾಜಸ್ಥಾನದ ಬನ್ಸ್ ವಾಡ ಮೂಲದ 20 ಮಂದಿ ಕಾರ್ಮಿಕರ ಮೇಲೆ ಹರಿದಿದ್ದು, ಪರಿಣಾಮ 15 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಇನ್ನೂ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಟ್ರಕ್ ವಶಪಡಿಸಿಕೊಂಡು ಚಾಲಕ ಹಾಗೂ ಕ್ಲೀನರ್‍ನನ್ನು ಬಂಧಿಸಿದ್ದಾರೆ.