ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು ನಾಲ್ವರು ಸಾವು…

64
firstsuddi

ನವದೆಹಲಿ: ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು ನಾಲ್ವರು ಸಾವನ್ನಪ್ಪಿದ್ದಾರೆ. ಕಳೆದ ಮಧ್ಯರಾತ್ರಿ 1:51ರ ಸುಮಾರಿಗೆ ನಗರದ ಸೀಮಾಪುರಿಯ ಡಿಟಿಸಿ ಡಿಪೋ ಪ್ರದೇಶದಲ್ಲಿ ಅವಘಡ ನಡೆದಿದೆ. 

ಮೃತರನ್ನು 52 ವರ್ಷದ ಕರೀಂ, ಚೊಟ್ಟೆ ಖಾನ್ (25), ಶಾ ಆಲಂ (38), ರಾಹುಲ್ (45) ಎಂದು ಗುರುತಿಸಲಾಗಿದೆ. 16 ವರ್ಷದ ಮನೀಶ್ ಮತ್ತು 30 ವರ್ಷದ ಪ್ರದೀಪ್ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಘಟನೆಯ ನಂತರ ಚಾಲಕ ಟ್ರಕ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವಾಹನವನ್ನು ಪತ್ತೆಹಚ್ಚಲು ದೆಹಲಿ ಪೊಲೀಸರು ಅನೇಕ ತಂಡಗಳನ್ನು ರಚಿಸಿದ್ದಾರೆ.