ರಾಂಚಿ: ಏಕಕಾಲಕ್ಕೆ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

66
firstsuddi

ರಾಂಚಿ: ಜಾರ್ಖಂಡ್‌ನ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಮಹಿಳೆಯೊಬ್ಬರು ಏಕಕಾಲಕ್ಕೆ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಚತ್ರಾ ಜಿಲ್ಲೆಯ ಇತ್ಖೋರಿ ನಿವಾಸಿಯಾದ ಮಹಿಳೆ ಗರ್ಭಿಣಿಯಾದ 7 ತಿಂಗಳೊಳಗೆ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಸಂಬಂಧಿಕರಲ್ಲಿ ಆಶ್ಚರ್ಯ ಉಂಟು ಮಾಡಿದರೆ, ರಿಮ್ಸ್ ಆಸ್ಪತ್ರೆಯಲ್ಲಿ ಇದು ದೊಡ್ಡ ಚರ್ಚಾ ವಿಷಯವಾಗಿದೆ.

ಡಾ. ಶಶಿಬಾಲಾ ಸಿಂಗ್ ಅವರ ನೇತೃತ್ವದಲ್ಲಿ ಯಶಸ್ವಿ ಹೆರಿಗೆಯನ್ನು ನಡೆಸಲಾಗಿದ್ದು, ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ನವಜಾತ ಶಿಶುಗಳು ಕಡಿಮೆ ತೂಕವನ್ನು ಹೊಂದಿದ್ದು, ಸದ್ಯಕ್ಕೆ ನಿಯೋನಾಟಲ್ ತೀವ್ರ ನಿಗಾ ಘಟಕದಲ್ಲಿ (ಎನ್‍ಐಸಿಯು) ವೀಕ್ಷಣೆಗಾಗಿ ಇರಿಸಲಾಗಿದೆ.