ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ- ಸಿಡಿಲು ಬಡಿದು ಓರ್ವ ಸಾವು…

48
firstsuddi

ವಿಜಯಪುರ: ರಾಜ್ಯದಲ್ಲಿ ನಿನ್ನೆ ಹಲವೆಡೆ ಭಾರೀ ಮಳೆಯಾಗಿದ್ದು, ಬಿರು ಬಿಸಿಲಿಗೆ ತತ್ತರಿಸಿದ್ದ ಜನ ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ. ಅದರಂತೆ ತಾಲೂಕು, ತಿಕೋಟ ಗ್ರಾಮದಲ್ಲಿ ಮಳೆ ತಂಪೆರೆದಿದ್ದು, ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

ಬೀರಪ್ಪ ನಿಂಗಪ್ಪ ಅವರಾದಿ(16) ಮೃತ ರ್ದುದೈವಿ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿನ್ನೆ ವಿಜಯಪುರ, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.