ರಾಮ ಮಂದಿರ ನಿರ್ಮಾಣ ವಿರೋಧಿಸುವವರು ಸಂವಿಧಾನ ವಿರೋಧಿಗಳು : ಪ್ರಮೋದ್ ಮುತಾಲಿಕ್.

244
firstsuddi

ಉಡುಪಿ : ರಾಮ ಜನ್ಮಭೂಮಿಗಾಗಿ ನಿರಂತರ ಹೋರಾಟ ನಾಡಿದ ಪ್ರವೀಣ್ ತೊಗಾಡಿಯಾರನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಅತೀವ ನೋವು ತಂದಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಬ್ರಹ್ಮಾವರ ಸಮೀಪದ ನೀಲಾವರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ 32 ವರ್ಷ ತನ್ನ ಸಂಸಾರವನ್ನೇ ದೂರವಿಟ್ಟು ತ್ಯಾಗದ ಜೀವನ ನಡೆಸಿ ಪ್ರವೀಣ್ ತೊಗಾಡಿಯಾ ರಾಮಜನ್ಮಭೂಮಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು ಎನ್ನುವುದು ಲಕ್ಷಾಂತರ ಹಿಂದೂಗಳ ತುಡಿತ ಎಂದು ಆಗ್ರಹಿಸದರು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅಯೋಧ್ಯ ಹೋರಾಟಕ್ಕೆ ಹೊಸ ಹುರುಪು ಬಂದಿದ್ದು, ರಾಮ ಮಂದಿರ ಶಿಲಾನ್ಯಾಸ ಜಗತ್ತಿನ ಇತಿಹಾಸದ ಪುಟ ಸೇರಲಿದೆ. ಇದರಿಂದ ಲಕ್ಷಾಂತರ ಜನರ ತ್ಯಾಗ ಬಲಿದಾನ ಫಲ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಶಿಲಾನ್ಯಾಸ ಆಗುತ್ತಿರುವುದು ಖುಷಿಕೊಟ್ಟಿದ್ದು, ಶಿಲಾನ್ಯಾಸದ ದಿನವೇ ನಮಗೆ ದೀಪಾವಳಿ ರಾಮನವಮಿ ಆಗಿದೆ. ಅಂದು ಪ್ರತಿ ಮನೆಯಲ್ಲೂ ನಾಮಸ್ಮರಣೆ ಮಾಡಿ ದೀಪ ಬೆಳಗೋಣ ಎಂದು ಹೇಳಿದರು.
ರಾಮ ಮಂದಿರಕ್ಕಾಗಿ ಅಂಜನಾದ್ರಿ ಬೆಟ್ಟದಿಂದ ಶಿಲೆಯನ್ನು ಪೇಜಾವರ ಶ್ರೀಗಳ ಮೂಲಕ ಅಯೋಧ್ಯೆಗೆ ಕಳುಹಿಸುತ್ತೇವೆ. ರಾಮ ಮಂದಿರ ನಿರ್ಮಾಣ ಸಿಂಘಾಲ್, ಪೇಜಾವರ ಶ್ರೀ, ನೃತ್ಯ ಗೋಪಾಲದಾಸರ ಹೋರಾಟದ ಫಲವಾಗಿ ನಡೆಯುತ್ತಿದೆ ಎಂದರು.
ರಾಮ ಮಂದಿರ ಶಿಲಾನ್ಯಾಸ ವಿರೋಧಿಗಳು ಸಂವಿಧಾನ ವಿರೋಧಿಗಳು ಆಗಿದ್ದು, ಅವರು ಈ ಮೂಲಕ ಸುಪ್ರೀ ಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದಾರೆ ಎಂದ ಮುತಾಲಿಕ್ ಅವರು ಯಾರೇ ವಿರೋಧಿಸಿದರೂ ಕೂಡಾ ಅದು ನ್ಯಾಯಾಂಗ ನಿಂದನೆ ಆಗುತ್ತದೆ. ಕಾಂಗ್ರೆಸ್, ಕಮ್ಯುನಿಸ್ಟ್ ನವರು ಅಜ್ಮೀರ್ ದರ್ಗಾಗೆ ಹೋಗಲ್ವಾ? ದರ್ಗಾಗೆ ಚಾದರ ಹೊದಿಸಿ ಬರುವುದಕ್ಕೆ ತೊಂದರೆ ಇಲ್ವಾ? ಸಿದ್ದರಾಮಯ್ಯ ಟಿಪ್ಪುವಿನ ವೇಷ ಹಾಕಿ ಖಡ್ಗ ಹಿಡಿದುಕೊಳ್ಳಬಹುದು. ಪ್ರಧಾನಿ ಶಿಲಾನ್ಯಾಸ ಮಾಡುವುದನ್ನು ವಿರೋಧಿಸುವುದು ಶತ ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದರು.