ರಾಮ ಮಂದಿರದ ಹೊರಗೆ ಎರಡು ಗುಂಪುಗಳ ನಡುವೆ ಘರ್ಷಣೆ – ವಾಹನಗಳಿಗೆ ಬೆಂಕಿ…

49
firstsuddi

ಮುಂಬೈ : ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕಿರಾದ್‌ಪುರದ ರಾಮಮಂದಿರದ ಹೊರಗೆ ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಕಲ್ಲು ತೂರಾಟ, ಖಾಸಗಿ ಹಾಗೂ ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಪೊಲೀಸರು ಅಶ್ರವಾಯು ಸಿಡಿಸಿ ಉದ್ರಿಕ್ತ ಗುಂಪನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಕಿರಾದ್‌ಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಆದರೆ ಈಗ ನಿಯಂತ್ರಣದಲ್ಲಿದೆ, ಹಲವಾರು ರಾಜಕೀಯ ಮುಖಂಡರು ಸ್ಥಳಕ್ಕೆ ಆಗಮಿಸಿ ಶಾಂತಿಗಾಗಿ ಮನವಿ ಮಾಡಿದ್ದಾರೆ.

ಛತ್ರಪತಿ ಸಂಭಾಜಿನಗರದ ಪೊಲೀಸ್ ಕಮಿಷನರ್ ನಿಖಿಲ್ ಗುಪ್ತಾ ಮಾತನಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಯ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ರಾಮ ಮಂದಿರಕ್ಕೆ ತೆರಳಿದ್ದ ವಿಡಿಯೋ ಒಂದನ್ನು ಎಐಎಂಐಎಂನ ರಾಷ್ಟ್ರೀಯ ಕಾರ್ಪೋರೇಟರ್ ಮೊಹಮ್ಮದ್ ನಾಸಿರುದ್ದೀನ್ ಹಂಚಿಕೊಂಡಿದ್ದರು. ಇದನ್ನು ಕೆಲವು ಕಿಡಿಗೇಡಿಗಳು ದೇವಾಲಯದ ಮೇಲೆ ದಾಳಿ ಎಂದು ಬಿಂಬಿಸಿದ್ದರು.