ರಾಯಚೂರಿನಲ್ಲಿ ಡೆಂಘೀ ಜ್ವರಕ್ಕೆ ಐದು ವರ್ಷದ ಬಾಲಕ ಬಲಿ…

62
firstsuddi

ರಾಯಚೂರು : ನಗರದ ಮಾನವಿ ಪಟ್ಟಣದಲ್ಲಿ ಡೆಂಘೀ ಜ್ವರಕ್ಕೆ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾನವಿ ಪಟ್ಟಣದ ನಿವಾಸಿ ಮಂಜುನಾಥ ಎನ್ನುವವರ ಪುತ್ರ ಸಿದ್ದಾರ್ಥ (5) ಡೆಂಘೀ ಜ್ವರದಿಂದ ಬಳಲಿ ಮೃತಪಟ್ಟಿದ್ದಾನೆ. ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ತಪಾಸಣೆ ಮಾಡಿದಾಗ ಡೆಂಘೀ ಜ್ವರ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಮಗು ಸಾವನ್ನಪ್ಪಿದ್ದು, ಡೆಂಘೀ ಜ್ವರದಿಂದ ಮೃತಪಟ್ಟಿದೆ ಎಂದು ದೃಢಪಟ್ಟಿದೆ.

ಘಟನೆ ವಿಚಾರ ತಿಳಿದು ಬಾಲಕನ ಮನೆಗೆ ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಇತ್ತ ಮಗುವನ್ನ ಕಳೆದುಕೊಂಡ ಕುಟುಂಬಸ್ಥರಲ್ಲಿ ತೀವ್ರ ದುಃಖ ಮನೆ ಮಾಡಿದೆ.