ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಲೇಡಿ ತಹಶೀಲ್ದಾರ್!

83
firstsuddi

ಬೀದರ್ : ಸುಮಾರು 15 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ತಾಲ್ಲೂಕಿನ ತಹಶೀಲ್ದಾರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ನಗರದ ಚಿದ್ರಿ ಗ್ರಾಮದ ಸರ್ವೆ ನಂಬರ್ 15 ರಲ್ಲಿ ಭೂಮಿ ಮ್ಯುಟೇಷನ್ ಮಾಡಲು ತಹಶೀಲ್ದಾರ್ ಗಂಗಾವತಿ ಲೀಲಾಧರ್ ಎಂಬಾತರಿಗೆ 20 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಲೀಲಾಧರ್ 15 ಲಕ್ಷ ರೂ. ಮುಂಗಡ ನೀಡಲು ಬಂದಾಗ ಎಸಿಬಿ ಅಧಿಕಾರಿಗಳು ತಹಶೀಲ್ದಾರ್ ಗಂಗಾದೇವಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ನಗರದ ಡಿಎಸ್ ಪಿ ಹಣಮಂತರಾಯ ನೇತೃತ್ವದ ತಂಡ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಅನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ.