ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿ ; ರಾಷ್ಟ್ರಪತಿಗೆ ಮನವಿ…

84
firstsuddi

ಚಿಕ್ಕಮಗಳೂರು : ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಭಾರತೀಯ ಕಿಸಾನ್ ಸಂಘ ಮನವಿ ಸಲ್ಲಿಸಿದೆ.

ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್.ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಮಹೇಶ್ ಕುಂದೂ ರು, ಎಂ.ಸಿ.ಸೋಮಶೇಖರ್ ಮತ್ತಿ ತರರ ನೇತೃತ್ವದಲ್ಲಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ರೈಲ್ವೆ, ರಸ್ತೆ, ವಿದ್ಯುನ್ಮಾ ನ ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿ ಮಂಗಳನ ಅಂಗಳದವರೆಗೂ ತಲು ಪಿದ್ದೇವೆ. ಆದರೆ ಜೀವನಕ್ಕೆ ಅತ್ಯಾವ ಶ್ಯಕವಾಗಿ ಬೇಕಾದ ಆಹಾರ ಉತ್ಪಾದಿ ಸುವ ಕೃಷಿ ಕ್ಷೇತ್ರವು ಇಂದು ದುಸ್ಥಿತಿಯತ್ತ ಸಾಗುತ್ತಿದೆ.

ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ ನಗರದತ್ತ ಸಾಗು ತ್ತಿರುವವರ ಸಂಖ್ಯೆ ಗಣನೀಯವಾ ಗಿ ಏರುತ್ತಿದೆ. ರೈತರು ಬೆಳೆದ ಬೆಳೆ ಗಳ ವೆಚ್ಚ ಅಧಿಕವಾಗಿ ಪ್ರಕೃತಿ ವಿಕೋ ಪದಿಂದ ನಷ್ಟ ಉಂಟಾಗಿ ಲಾಭದಾ ಯಕ ಬೆಲೆ ಸಿಗದ ಕಾರಣ ಕೃಷಿ ಯಿಂದ ವಿಮುಕರಾಗುತ್ತಿದ್ದಾರೆ.

ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ.

ಈ ವ್ಯವಸ್ಥೆ ಸರಿಯಾಗಬೇಕಾದರೆ ರೈತರಿಗೆ ಉತ್ಪಾದನಾ ವೆಚ್ಚದ ಆಧಾ ರದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.

ರೈತರ ಉತ್ಪನ್ನಗಳಿಗೆ ಲಾಭದಾ ಯಕ ಬೆಲೆ ಘೊಷಿಸಿ, ಖರೀದಿ ಗ್ಯಾರಂಟಿ ನೀಡಿ, ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾಗದಂತೆ ಕಾನೂನು ಜಾರಿ ಮಾಡಬೇಕು. ಪ್ರತಿ ವರ್ಷ ಬೆಲೆ ಘೋಷಣೆಯೂ ಹಣ ದುಬ್ಬರ ದರಕ್ಕೆ ಅನುಗುಣವಾಗಿರಬೇಕು. ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿ ಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹ ವಾಗಿಸಬೇಕು ಎಂದು ಒತ್ತಾಯಿಸಿ ದರು.

ಈ ಸಂದರ್ಭದಲ್ಲಿ ಕುಂದೂರು ಪೂರ್ಣೇಶ್, ಸುರೇಶ್, ಜಯಂತ್, ಎಂ.ಎಂ.ದಯಾನಂದ, ವಿಜಯ್ ಕುಮಾರ್, ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.