ವಿನಯ್ ಕುಲಕರ್ಣಿ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲು…

70
firstsuddi

ಬೆಳಗಾವಿ : ಜೈಲಿನಿಂದ ಹೊರ ಬಂದ ದಿನವೇ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಾಗಿದೆ.

ಕೊರೊನಾ ನಿಯಮ ಉಲ್ಲಂಘನೆ ಹಾಗೂ ವೀಕೆಂಡ್ ಕರ್ಪ್ಯೂ ಉಲ್ಲಂಘಿಸಿದ ಮಾಜಿ ಸಚಿವರ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡರೆ , ಹಿಂಡಲಗಾ ಗ್ರಾಮದ ಪಿಡಿಓ ಮತ್ತೊಂದು ದೂರು ದಾಖಲಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಸೆಕ್ಷನ್ 188 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇನ್ನೊಂದೆಡೆ ಕೋವಿಡ್ ನಿಯಮ ಉಲ್ಲಂಘಿಸಿ ಹಿಂಡಲಗಾ ಜೈಲಿನಿಂದ ಗಣಪತಿ ದೇವಸ್ಥಾನವರೆಗೆ ಮೆರವಣಿಗೆ ನಡೆಸಿದ್ದರು. ಹೂಮಳೆಗೆರೆದು ಅಭಿಮಾನಿಗಳು ಸಂಭ್ರಮಿಸಿದ್ದರು. ಹೀಗಾಗಿ ಕೋವಿಡ್ ನಿಯಮ ಉಲ್ಲಂಘಿಸಿದ ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.