ವಿವಾಹಿತ ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಕೊಲೆಗೆ ಯತ್ನ- ವ್ಯಕ್ತಿಯ ಬಂಧನ…

574
firstsuddi

ಹಾವೇರಿ : ವಿವಾಹಿತ ಮಹಿಳೆಯ ಗುಪ್ತಾಂಗಕ್ಕೆ ವ್ಯಕ್ತಿಯೋರ್ವ ಆ್ಯಸಿಡ್ ಎರಚಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದ ಸಿದ್ದನಗುಡ್ಡದಲ್ಲಿ ನಡೆದಿದೆ. ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ್ ಕಳಸದ(43) ಕೃತ್ಯ ಎಸಗಿದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಮಂಜುನಾಥ್ ಅವರು ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಈ ವೇಳೆ ನಿನ್ನೆ ಮಹಿಳೆಯನ್ನು ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಕರೆದುಕೊಂಡು ಹೋಗಿ ನೀನು ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಜಗಳವಾಡಿ ಬಾಟಲ್‍ನಲ್ಲಿ ತಂದಿದ್ದ ಆ್ಯಸಿಡ್‍ಅನ್ನು ಮಹಿಳೆಯ ಗುಪ್ತಾಂಗ ಹಾಗೂ ಕಾಲಿಗೆ ಎರಚಿದ್ದು, ಈ ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಂಕಾಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.