ಹೈದರಾಬಾದ್ : ವಿಶಾಖಪಟ್ಟಣಂನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಸಾಲ್ವೆಂಟ್ ಕಂಪನಿಯಲ್ಲಿ ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡು ನಾಲ್ವರು ಗಾಯಗೊಂಡಿದ್ದಾರೆ. ವಿಶಾಖಪಟ್ಟಣಂನ ಜೆಎನ್ ಫಾರ್ಮಾ ನಗರದಲ್ಲಿರುವ ಸಾಲ್ವೆಂಟ್ ಕಂಪನಿಯಲ್ಲಿ ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡ ಪರಿಣಾಮ ಕಂಪನಿಯ ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.










