ವಿಶ್ವದ ಅತೀ ದೊಡ್ಡ ‘ಮೊಟೆರೊ’ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ…

173
First Suddi

ಅಹಮದಾಬಾದ್ : ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಗುಜರಾತ್ ನ ಅಹಮದಾಬಾದ್ ಮೊಟೆರೊ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಏಳು ವರ್ಷದ ನಂತರ ಈ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದಕ್ಕೆ ಚಾಲನೆ ಸಿಗಲಿದ್ದು, ಬರೋಬ್ಬರಿ 1,10,000 ಜನರು ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ. ಫೆ. 24ರಿಂದ ಈ ಮೈದಾನದಲ್ಲಿ ಹೊನಲು ಬೆಳಕಿನ ಪಿಂಕ್ ಬಾಲ್ ಪಂದ್ಯ ನಡೆಯಲಿದೆ.