ಚಿಕ್ಕಮಗಳೂರು ಜ. 16. ನಗರದ ಯುವ ಗಾಯಕ ಮಲ್ಲಿಗೆ ಸುಧೀರ್ ಅವರಿಗೆ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಹಾಡುವ ಭಾಗ್ಯ ಲಭಿಸಿದೆ. ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ತಮಗೆ ಹಾಡಲು ಅವಕಾಶ ನೀಡುವಂತೆ ಮಲ್ಲಿಗೆ ಸುಧೀರ್ ಅವರು ಮಾಡಿದ ಮನವಿಯನ್ನು ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ಪುರಸ್ಕರಿಸಿದ ಹಿನ್ನೆಲೆಯಲ್ಲಿ ಸುಧೀರ್ ಅವರು ಜನವರಿ 18 ರಂದು ಅಯ್ಯಪ್ಪ ಸ್ವಾಮಿ ದೇವಾಲಯದ ವೇದಿಕೆಯಲ್ಲಿ ತಮ್ಮ ಪುತ್ರ ಅಭಿಷೇಕ್ ಮಲ್ಲಿಗೆ ಹಾಗೂ ತಂಡದೊಂದಿಗೆ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.










