ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸ್ಫೋಟಕ ಪತ್ತೆ!

107
Firstsuddi

ಶಿವಮೊಗ್ಗ : ಜಿಲ್ಲೆಯ ಸೋಗಾನೆ ಸಮೀಪ ನಿರ್ಮಾಣ ಮಾಡುತ್ತಿರುವ ನೂತನ ವಿಮಾನ ನಿಲ್ದಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತಯಾಗಿವೆ. ಸುಮಾರು 3,200 ಡಿಟೋನೇಟರ್ ಹಾಗೂ 36 ಬಾಕ್ಸ್ ಜಿಲೆಟಿನ್ ಪೇಸ್ಟ್ ಕಂಡು ಬಂದಿದೆ.

ಹುಣಸೋಡು ಬ್ಲಾಸ್ಟ್ ನಂತರ ಜಲ್ಲಿ ಕ್ರಷರ್ ಘಟಕಗಳು ಸ್ಥಗಿತಗೊಂಡಿದ್ದು, ಜಲ್ಲಿ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಳ್ಳಬಾರದೆಂಬ ಕಾರಣದಿಂದಾಗಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 4 ಎಕರೆ ಪ್ರದೇಶದಲ್ಲಿ ಜಲ್ಲಿ ಕ್ವಾರಿ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಮತಿ ನೀಡಿದ್ದರು.

ಹೀಗಾಗಿ ಕಾಮಗಾರಿಗೆ ಬೇಕಾದ ಜಲ್ಲಿ ಹಾಗೂ ಕಲ್ಲುಗಳನ್ಜು ಪಡೆಯಲು ಸ್ಫೋಟಕಗಳನ್ನು ಬಳಸಲಾಗಿದ್ದು, ಈ ಸ್ಫೋಟಕಗಳನ್ನು ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೋರ್ವ ಪೂರೈಕೆ ಮಾಡಿದ್ದರು . ಆದರೆ, ಸ್ಫೋಟಕಗಳನ್ನು ಸ್ಫೋಟಿಸುವವರು ಸಿಗದ ಕಾರಣ ವಾಹನ ಅಲ್ಲೆ ಬಿಟ್ಟು ವಾಪಸ್ ಆಗಿದ್ದರು. ಕಾಮಗಾರಿ ನಡೆಸುವವರು ವಾಹನ ಗುರುತಿಸಿ ತುಂಗಾ ನಗರ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಸ್ಫೋಟಕಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಅದನ್ನು ನಿಷ್ಕ್ರಿಯಗೊಳಿಸಿ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.