ಶ್ರೀಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವ- ಸಹಸ್ರಾರು ದೀಪಗಳನ್ನು ಹಚ್ಚಿ ಸಂಭ್ರಮಿಸಿದ ಭಕ್ತರು…

61
firstsuddi

ಚಿಕ್ಕಮಗಳೂರು: ಕಾರ್ತಿಕ ಮಾಸದ ಕೊನೆಯ ದಿನವಾದ ನಿನ್ನೆ ನಗರದ ಇತಿಹಾಸ ಪ್ರಸಿದ್ಧ ಶ್ರೀಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವ ನೂರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದ ಅದಿ ದೇವತೆಗಳಿಗೆ ಅಭಿಷೇಕ ವಿಶೇಷಪೂಜೆ ಅಲಂಕಾರ ಜರುಗಿತು. ಸಂಜೆಯಾಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ನೂರಾರು ಭಕ್ತರು ಸಹಸ್ರಾರು ದೀಪದ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು.

ರಾತ್ರಿ 8 ಗಂಟೆಗೆ ಪ್ರಧಾನ ಅರ್ಚಕ ಡಿ.ಆರ್.ಕುಮಾರಸ್ವಾಮಿ ಅವರು ಮಹಾಮಂಗಳಾರತಿಯೊಂದಿಗೆ ವೇದ ಘೋಷಗಳ ನಡುವೆ ದೇವಾಲಯದ ಮುಂಭಾಗದಲ್ಲಿ ಕಾರ್ತಿಯನ್ನು ಬೆಳಗಿಸಿದರು.

ದೀಪೋತ್ಸವದ ನಂತರ ದೇವಾಲಯದ ಅದಿದೇವತೆಗಳಿಗೆ ರಕ್ಷಾಧಾರಣೆ ಮಾಡಲಾಯಿತು. ಪ್ರಸಾದ ವಿತರಣೆ ನಡೆಯಿತು. ಕಾರ್ತಿಕ ಮಾಸದ ಕೊನೆಯ ದಿನವಾದ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಬೆಳಗಿನಿಂದ ರಾತ್ರಿವರೆಗೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ.ಗಿರಿಜಾ ಶಂಕರ್, ಕಾರ್ಯದರ್ಶಿ ಡಿ.ಎನ್. ಮೋಹನ್, ಸದಸ್ಯರಾದ ಕೆ.ಎಸ್.ನಂಜುಂಡರಾವ್, ಎಂ.ಉಮೇಶ್, ಸಿ.ಎಸ್.ಮಂಜುನಾಥ್ ಹಾಜರಿದ್ದರು.