ಸತತ ಏಳನೇ ದಿನವೂ ತೈಲ ಬೆಲೆ ಏರಿಕೆ…

65
firstsuddi

ನವದೆಹಲಿ : ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 80 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದೆ.  ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 100.21 ರೂಪಾಯಿ ಹಾಗೂ ಡೀಸೆಲ್ 99.41 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ ದರ 105.94 ರೂಪಾಯಿ ಹಾಗೂ ಡೀಸೆಲ್ 96.00 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 109.68 ರೂ. ಹಾಗೂ ಡೀಸೆಲ್ 94.62 ರೂಪಾಯಿ ಇದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 75 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ. ಪೆಟ್ರೋಲ್ ದರ ರೂ. 115.04, ಡೀಸೆಲ್ ರೂ.99.25 ದಾಖಲಾಗಿದೆ. ಹೈದರಾಬಾದ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 113.61 ರೂ. ಮತ್ತು ಡೀಸೆಲ್  99.84 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 105.62 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ದರ ರೂ. 89.70ಗೆ ಏರಿಕೆಯಾಗಿದೆ.