ಸತ್ತು ಹೋಗಿರುವ ಸರ್ಕಾರ ಮಾತ್ರ ಹೀಗಿರಲು ಸಾಧ್ಯ, ಜೀವಂತವಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಜೀವಂತಿಕೆ ತೋರಿಸಿ: ಸಿದ್ದರಾಮಯ್ಯ.

250
firstsuddi

ಬೆಂಗಳೂರು : ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ತೆಗೆಯುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತು ಹೋಗಿರುವ ಸರ್ಕಾರ ಮಾತ್ರ ಹೀಗಿರಲು ಸಾಧ್ಯ. ಜೀವಂತವಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಜೀವಂತಿಕೆ ತೋರಿಸಿ. ಜನರ ಗಮನ ಬೇರೆ ಕಡೆ ಸೆಳೆಯುವ ಕುತಂತ್ರ ಬೇಡ. ಮೊದಲು ನೆರೆ ಪರಿಹಾರ ಮಾಡಿ ಲೆಕ್ಕಕೊಡಿ, ಆ ಮೇಲೆ ಟಿಪ್ಪು,ಸಾವರ್ಕರ್ ಬಗ್ಗೆ ಮಾತನಾಡೋಣ. ನನ್ನ ಮಾತು ನಿಮಗೆ ಸಹಿಸಲಾಗುವುದಿಲ್ಲ, ಇದಕ್ಕಾಗಿಯೇ ಕಾಟಾಚಾರಕ್ಕೆ ವಿಧಾನಮಂಡಲ ಅಧಿವೇಶನ ನಡೆಸಿ ಮುಗಿಸಿಬಿಟ್ಟಿರಿ. ಈಗ ಯಾವುದೋ ವಿಡಿಯೋ, ಇನ್ನಾವುದೋ ಸುಳ್ಳು ಆರೋಪಗಳನ್ನು ಮಾಡಿ ಬಾಯಿ ಮುಚ್ಚಿಸಲು ನೋಡುತ್ತಿದ್ದೀರಿ. ಬಿಜೆಪಿ ನಾಯಕರೇ, ಈ ರೀತಿ ನನ್ನ ಬಾಯಿ ಕಟ್ಟಲಾಗದು ಎಂದು ಟ್ವೀಟ್ ಮಾಡಿದ್ದಾರೆ.