ಸನ್ಮಾನ್ಯ ಬಿಜೆಪಿ ನಾಯಕರೇ, ಮಹಾರಾಷ್ಟ್ರ ಚುನಾವಣೆ ಮುಗಿಯಿತಲ್ಲಾ, ಮುಂದಿನ ಚುನಾವಣೆ ಕಾಲಕ್ಕೆ ಸಾವರ್ಕರ್ ಬಗ್ಗೆ ಮಾತಾಡೋಣ : ಸಿದ್ದರಾಮಯ್ಯ ಟಾಂಗ್…

229
firstsuddi

ಬೆಂಗಳೂರು : ಸನ್ಮಾನ್ಯ ಬಿಜೆಪಿ ನಾಯಕರೇ, ಮಹಾರಾಷ್ಟ್ರ ಚುನಾವಣೆ ಮುಗಿಯಿತಲ್ಲಾ, ಮುಂದಿನ ಚುನಾವಣೆ ಕಾಲಕ್ಕೆ ಸಾವರ್ಕರ್ ಬಗ್ಗೆ ಮಾತಾಡೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ. “ಸನ್ಮಾನ್ಯ ಬಿಜೆಪಿ ನಾಯಕರೇ, ಮಹಾರಾಷ್ಟ್ರ ಚುನಾವಣೆ ಮುಗಿಯಿತಲ್ಲಾ, ಮುಂದಿನ ಚುನಾವಣೆ ಕಾಲಕ್ಕೆ ಸಾವರ್ಕರ್ ಬಗ್ಗೆ ಮಾತಾಡೋಣ. ಈಗ ತುರ್ತಾಗಿ ನಿರುದ್ಯೋಗ, ಬೆಲೆ ಏರಿಕೆ, ದಿವಾಳಿಯಾಗುತ್ತಿರುವ ಬ್ಯಾಂಕ್ಗಳು, ರೈತರ ಕಷ್ಟಗಳು, ನೆರೆ-ಬರದ ಬಗ್ಗೆ ಚರ್ಚೆ ಮಾಡೋಣ” ಎಂದು ಟ್ವೀಟ್ ಮಾಡಿದ್ದಾರೆ.