ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ…

53
firstsuddi

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂರು ಜನರನ್ನು ಲೈಫ್ ಗಾರ್ಡ್‍ಗಳು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲ ತೀರದಲ್ಲಿ ನಡೆದಿದೆ.

ಹಾವೇರಿ ಮೂಲದ ಹಂಸಬಾವಿಯ ಸಿದ್ದಾರ್ಥ್ (24), ದೀಕ್ಷಿತ್ (20), ಸಂತೋಷ್ (24) ರಕ್ಷಣೆಗೊಳಗಾದವರು. ಚಂದ್ರಶೇಖರ್ ದೇವಾಡಿಗ, ಜಯರಾಮ್, ಪಾಂಡು, ಹನುಮಂತು ರಕ್ಷಣೆ ಮಾಡಿದ ಲೈಫ್ ಗಾರ್ಡ್‍ಗಳಾಗಿದ್ದಾರೆ.

ಐದು ಜನರ ತಂಡ ಧರ್ಮಸ್ಥಳಕ್ಕೆ ಹೋಗಿ ಮುರುಡೇಶ್ವರಕ್ಕೆ ಇಂದು ಆಗಮಿಸಿದ್ದರು. ಅಂತೆಯೇ ಅವರು ಸಮುದ್ರಕ್ಕೆ ಇಳಿದಿದ್ದು, ಈ ವೇಳೆ ಅಲೆಗಳಿಗೆ ಕೊಚ್ಚಿಹೋಗಿದ್ದರು. ಇದನ್ನು ನೋಡಿದ ಲೈಫ್ ಗಾರ್ಡ್‍ಗಳು ಅವರನ್ನು ರಕ್ಷಣೆ ಮಾಡಿದ್ದಾರೆ.