ಸಾಲುಮರದ ತಿಮ್ಮಕ್ಕನಿಗೆ ಸನ್ಮಾನ ಮಾಡಿದ ತೆಲಂಗಾಣ ಸಿಎಂ.

65
firstsuddi

ಹೈದರಾಬಾದ್ : ಸಾಲುಮರದ ತಿಮ್ಮಕ್ಕರನ್ನು ತೆಲಂಗಾಣ ಸಿಎಂ ಸನ್ಮಾನ ಮಾಡಿ ಗೌರವಿಸಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಚಂದ್ರಶೇಖರ್ ರಾವ್, ಶತಾಯುಷಿ ಸಾಲು ಮರದ ತಿಮ್ಮಕ್ಕನನ್ನು ಸನ್ಮಾನಿಸಿ ಗೌರವ ಸಮರ್ಪಣೆ ಮಾಡಿ, ಮರಗಳನ್ನು ಉಳಿಸಿ, ಬೆಳೆಸಿದ ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆಯನ್ನು ಗುಣಗಾನ ಮಾಡಿದ್ದಾರೆ. ಸಿಎಂ ಚಂದ್ರಶೇಖರ್ ರಾವ್ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಕ್ಕಳಂತೆ ಆರೈಕೆ ಮಾಡಿ ಅವುಗಳನ್ನು ಬೃಹತ್ ಮರಗಳನ್ನಾಗಿ ಮಾಡುವ ಮೂಲಕ ಪರಿಸರದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ತಿಮ್ಮಕ್ಕ ಕಾರಣೀಭೂತರಾಗಿದ್ದಾರೆ.

ತಿಮ್ಮಕ್ಕ ಅವರ 111ನೇ ಜನ್ಮ ದಿನಾಚರಣೆ ಬೆಂಗಳೂರಿನ ವಸಂತ ನಗರದಲ್ಲಿ ಇರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜೂನ್ 30, 2022ರಂದು ನಡೆಯಲಿದ್ದು, ಈ ಕುರಿತ ಕಿರು ಹೊತ್ತಿಗೆಯನ್ನೂ ಇದೇ ವೇಳೆ ಬಿಡುಗಡೆ ಮಾಡಲಾಗಿದೆ.