ಸಿಂಗಾಪುರ ಓಪನ್ : ಪಿ.ವಿ.ಸಿಂಧು ಫೈನಲ್​ಗೆ ಎಂಟ್ರಿ…

87
firstsuddi

ಸಿಂಗಾಪುರ : ಇಂದು ನಡೆದ ಸಿಂಗಾಪುರ ಓಪನ್ ನ ಮಹಿಳೆಯರ ಸಿಂಗಲ್ ಸೆಮಿಫೈನಲ್ ನಲ್ಲಿ ಭಾರತದ ತಾರಾ ಶಟ್ಲರ್ ಪಿವಿ ಸಿಂಧು ಜಪಾನ್ ಆಟಗಾರ್ತಿಯನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

32 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 21-15 21-7 ಸೆಟ್ ಗಳಿಂದ ಜಪಾನಿನ ಸೈನಾ ಕವಾಕಮಿ ಅವರನ್ನು ಸೋಲಿಸುವ ಮೂಲಕ ಸಿಂಧು ಗೆಲುವು ಸಾಧಿಸಿದರು. ಭಾರತದ ಆಟಗಾರ್ತಿಯ ಪರಾಕ್ರಮದ ಮುಂದೆ ಜಪಾನ್ ಆಟಗಾರ್ತಿ ನೆಲಕಚ್ಚಿದರು. ಈಗ ಅವರು 2022ರ ಸೀಸನ್ ನ ತನ್ನ ಮೊದಲ ಸೂಪರ್ 500 ಪ್ರಶಸ್ತಿಯಿಂದ ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.

ಎರಡು ಬಾರಿ ಒಲಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ವರ್ಷ ಸೈಯದ್ ಮೋದಿ ಇಂಟರ್ ನ್ಯಾಶನಲ್ ಮತ್ತು ಸ್ವಿಸ್ ಓಪನ್ ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.