ಸಿಎಂ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ…

84
firstsuddi

ಬೆಂಗಳೂರು : ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಸಿಎಂ ನಿವಾಸದೊಳಗೆ ಹೋಗುವ ಸಾರ್ವಜನಿಕರು ಹಾಗು ಸಿಎಂ ಭೇಟಿಗೆ ಬರುವವರು ಮೊಬೈಲ್ ತರುವಂತಿಲ್ಲ ಎಂದು ಮುಖ್ಯಮಂತ್ರಿಗಳ ಆರ್.ಟಿ ನಗರದ ನಿವಾಸದ ಎದುರು ಫಲಕ ಹಾಕಲಾಗಿದೆ.

ಕೃಷ್ಣಾ ಪ್ರವೇಶಿಸುವವರು ಮುಖ್ಯದ್ವಾರದ ತಪಾಸಣಾ ಕೇಂದ್ರದಲ್ಲಿ ಮೊಬೈಲ್ ಕೊಟ್ಟು ಟೋಕನ್ ಪಡೆದು ಒಳಹೋಗುವ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಸಿಎಂ ಭೇಟಿ ಮುಗಿಸಿ ವಾಪಸ್ ತೆರಳುವಾಗ ಟೋಕನ್ ನೀಡಿ ತಮ್ಮ ಮೊಬೈಲ್ ವಾಪಸ್ ಪಡೆಯಬೇಕಿದೆ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್,ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಬರುವ ಎಲ್ಲರಿಗೂ ಮೊಬೈಲ್ ನಿಷೇಧ ಮಾಡಿದ್ದರು.