ಸಿಎಂ ಯಡಿಯೂರಪ್ಪನವರಿಗೆ 79ನೇ ಹುಟ್ಟುಹಬ್ಬ : ಗಣ್ಯಾತೀಗಣ್ಯರಿಂದ ಶುಭಾಶಯ…

117
Firstsuddi

ಬೆಂಗಳೂರು: 79ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್ ಯಡಿಯೂರಪ್ಪನವರಿಗೆ ಪ್ರಧಾನ ಮೋದಿ ಸೇರಿದಂತೆ ಸಚಿವರು, ಶಾಸಕರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಕರ್ನಾಟಕ ಸಿಎಂ ಅವರಿಗೆ ಶುಭಾಶಯಗಳು. ಯಡಿಯೂರಪ್ಪ ಜಿ ನಮ್ಮ ಅತ್ಯಂತ ಅನುಭವಿ ನಾಯಕರಲ್ಲಿ ಒಬ್ಬರಾಗಿದ್ದು, ಅವರು ತಮ್ಮ ಜೀವನವನ್ನು ರೈತರು ಹಾಗೂ ಬಡವರ ಹಿತರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ. ಅವರ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕವಾಗಿ ಪ್ರಧಾನಿ ಮೋದಿ ಅವರು ಶುಭಾಶಯಕೋರಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಪ್ರಧಾನ ಮಂತ್ರಿ ದೇವೆಗೌಡರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವು ಗಣ್ಯರು ಸಿಎಂ ಮನೆಗೆ ಆಗಮಿಸಿ, ಯಡಿಯೂರಪ್ಪನವರಿಗೆ ಹೂ ಗುಚ್ಛ ನೀಡಿ ಶುಭ ಹಾರೈಸಿದರು.

ಛಲ, ಶಕ್ತಿ ಮತ್ತು ಹೋರಾಟದ ಮೂಲಕವೇ ಗುರುತಿಸಿಕೊಂಡಿರುವ ರೈತಬಂಧು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪೂಜ್ಯ ತಂದೆಯವರಾದ ಶ್ರೀಯುತ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಬಿಎಸ್ವೈ ಕಿರಿ ಪುತ್ರ ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರ ಶುಭಕೋರಿದ್ದಾರೆ.