ಸಿದ್ದರಾಮಯ್ಯಗೂ ಭೂಕಂಪನದ ಅನುಭವ – ಸ್ಥಳದಿಂದಲೇ ಕಂದಾಯ ಸಚಿವರಿಗೆ ಕರೆ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಲಹೆ…

59
firstsuddi

ಕಲಬುರಗಿ :  ಸತತ ಭೂಕಂಪನದಿಂದ ಆತಂಕಗೊಂಡು ಗ್ರಾಮವನ್ನು ತೊರೆಯುತ್ತಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಸ್ಥರಿಗೆ ಧೈರ್ಯ ತುಂಬಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು. ನಿನ್ನೆ ರಾತ್ರಿ 8ಗಂಟೆಗೆ ಗ್ರಾಮಸ್ಥರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಭೂಕಂಪನದ ಅನುಭವವಾಗಿದೆ. ಕಂಪನದ ಅನುಭವ ಆಗ್ತಿದ್ದತೆ ಅಲ್ಲಿಂದಲೇ ಕಂದಾಯ ಸಚಿವ ಆರ್.ಅಶೋಕ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ರು. ಕೂಡಲೇ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದ್ರು.

ಕಳೆದ ಹಲವು ದಿನಗಳಿಂದ ಲಘು ಭೂಕಂಪನಕ್ಕೆ ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ರಾತ್ರಿ ಆದರೆ ಸಾಕು ಭೂಮಿಯಿಂದ ಭೀಕರ ಸದ್ದು ಕೇಳಿ ಬರ್ತಿದ್ದು ಯಾವ ಕ್ಷಣದಲ್ಲಿ ಏನಾಗುತ್ತೋ ಅಂತ ಜನ ಆತಂಕದಲ್ಲಿದ್ದಾರೆ. ಭೂಕಂಪ ಪೀಡಿತ ಬಹುತೇಕ ಗ್ರಾಮಗಳಲ್ಲಿ ಜನ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕೆಲವರು ಗ್ರಾಮವನ್ನೇ ತೊರೆದಿದ್ದಾರೆ.  ಗಡಿಕೇಶ್ವರ ಮತ್ತು ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗುತ್ತಲೆ ಇದೆ. ಸೋಮವಾರ ರಾತ್ತಿ 9-55 ಕ್ಕೆ ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನ ಬಹುತೇಖ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು, ಇದರಿಂದ ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ. ಗಡಿಕೇಶ್ವರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಲಘು ಭೂಕಂಪನದಿಂದ ಅನೇಕ ಮನೆಗಳು ಬಿರಕು ಬಿಟ್ಟಿವೆ. ಒಟ್ಟಾರೆ ಭೂಕಂಪನ ಭೀತಿಯಲ್ಲಿ ಜನತೆ ಜೀವನ ಸಾಗಿಸ್ತಿದ್ದಾರೆ.