ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿ ಅರೆಸ್ಟ್…

43
firstsuddi

ಬೆಂಗಳೂರು : ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಧವನ್ ಸೋಹಾ ಬಂಧಿತ ಆರೋಪಿ. ಆಕ್ಟಿಂಗ್ ಕ್ಲಾಸ್ ಗಾಗಿ ಪ್ಲೆಮಿಂಗೋ ಸೆಲೆಬ್ರಿಟೀಸ್ ವಲ್ಡ್ ಎಂಬ ಇನ್ಸ್ ಟಿಟ್ಯೂಟ್ ತೆರೆದಿದ್ದ ಆರೋಪಿ ನಟನೆ ಕಲಿಯಲು ಬರುವವರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 30 ರಿಂದ 50 ಸಾವಿರ ಪಡೆದು ವಂಚಿಸುತ್ತಿದ್ದ.

ಇದೇ ರೀತಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.