ಸಿಮೆಂಟ್ ತುಂಬಿದ್ದ ಗೂಡ್ಸ್ ವಾಹನ ಪಲ್ಟಿ ; ಇಬ್ಬರು ಸ್ಥಳದಲ್ಲೇ ಸಾವು…

127
firstsuddi

ವಿಜಯಪುರ : ಸಿಮೆಂಟ್ ತುಂಬಿಕೊಂಡಿದ್ದ ಗೂಡ್ಸ್ ವಾಹನವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಬಳಿ ಸಂಭವಿಸಿದೆ.

ಮೃತರನ್ನು  ಢವಳಗಿ ನಿವಾಸಿ ನಾಗಪ್ಪ ದಂಡೆನ್ನವರ್(45) ಮತ್ತು ಗೆದ್ದಲಮರಿ ತಾಂಡಾದ ನಿವಾಸಿ ವೆಂಕಟೇಶ್ ಪವಾರ(40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗೆದ್ದಲಮರಿಯ ಗೋವಿಂದ ರಾಮು ಲಮಾಣಿ ಹಾಗೂ ನಾರಾಯಣಪೂರದ ಕುಮಾರ ರಾಮಪ್ಪ ಚವ್ಹಾಣ ಗಾಯಗೊಂಡಿದ್ದು, ಗಾಯಾಳುಗಳನ್ನು ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಪಲ್ಟಿಯಾಗಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.